ಒಂದು ಗಝಲ್
ಬರಹಗಾರರ ಬಳಗ
ನವೆಂಬರ್ ೨೮, ೨೦೨೫
೪ ವೀಕ್ಷಣೆಗಳು
ಪ್ರೀತಿಯು ಸಿಗಲಿಲ್ಲವೆಂದು ಹುಚ್ಚನಾಗದಿರು
ಮಾತದು ಬರಲಿಲ್ಲವೆಂದು ಖಿನ್ನನಾಗದಿರು
ಎಲ್ಲರ ಬದುಕೊಳಗೂ ತೂತುಗಳಿವೆ ಏಕೊ
ನೆಮ್ಮದಿಯು ಸಿಗಲಿಲ್ಲವೆಂದು ಬೆತ್ತಲಾಗದಿರು
ಮಾಡಿರುವ ಕರ್ಮ ಫಲವ ಉಣ್ಣಲೇ ಬೇಕು
ದಾರಿಗಳು ತಿಳಿಯಲಿಲ್ಲವೆಂದು ಕತ್ತಲಾಗದಿರು
ಮುತ್ತಿನ ಮಹಲಲ್ಲಿ ಮತ್ತದುವು ಇಲ್ಲವಾಯಿತೆ
ಪ್ರೀತಿಯದು ಸಿಗಲಿಲ್ಲವೆಂದು ಮೆತ್ತಗಾಗದಿರು
ಜೀವನದ ಪಯಣಗಳೆಲ್ಲ ಹೀಗೆ ಹೀಗೆಯೇ ಈಶಾ
ಬೇಕಾದ್ದು ದೊರೆಯಲಿಲ್ಲವೆಂದು ಮೌನಿಯಾಗದಿರು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ನವೆಂಬರ್ ೨೮, ೨೦೨೫
|
ನವೀಕರಿಸಿದ: ಏಪ್ರಿಲ್ ೨೩, ೨೦೨೬