ಒಂದು ಗಝಲ್
ಬರಹಗಾರರ ಬಳಗ
ನವೆಂಬರ್ ೨೯, ೨೦೨೫
೮ ವೀಕ್ಷಣೆಗಳು
ಬದುಕಿನಲ್ಲಿ ತ್ರಾಣವಿದ್ದರೂ ಬತ್ತಿದ್ದ ಮೌನಿಗರ ಕಾಲು ಹಿಡಿದು ಬೇಡುತ್ತೇವೆ
ಚೇತನದಲ್ಲಿ ಬಲವಿದ್ದರೂ ಹೊತ್ತಿದ್ದ ಮಣ್ಣಿಗರ ಕಾಲು ಹಿಡಿದು ಬೇಡುತ್ತೇವೆ
ಅಪಾಯದೊಳಗೆ ಉಪಾಯವಿದ್ದರೂ ಉಳ್ಳವರ ಕಾಲು ಹಿಡಿದು ಬೇಡುತ್ತೇವೆ
ವಂತಿಗೆಯಲ್ಲಿ ಕಷ್ಟವಿದ್ದರೂ ಕಂತಿದ್ದ ಮುಖದವರ ಕಾಲು ಹಿಡಿದು ಬೇಡುತ್ತೇವೆ
ನಿತ್ರಾಣದಲ್ಲಿ ಗೊಂದಲವಿದ್ದರೂ ಕಾಡಿದ್ದ ಯವನಿಗರ ಕಾಲು ಹಿಡಿದು ಬೇಡುತ್ತೇವೆ
ನಿರ್ಬಲದಲ್ಲಿ ಸಫಲತೆಯಿದ್ದರೂ ಹಾಡಿದ್ದ ಜವನಿಗರ ಕಾಲು ಹಿಡಿದು ಬೇಡುತ್ತೇವೆ
ಚಿಂತೆಯಲ್ಲಿ ಚೆಲುವಿದ್ದರೂ ಸಾಗಿರುವ ಜೋಡಿಗರ ಕಾಲು ಹಿಡಿದು ಬೇಡುತ್ತೇವೆ
ಚಿಂತನೆಯಲ್ಲಿ ಪ್ರಕಾಶವಿದ್ದರೂ ತಂಪಿದ್ದ ಜೊತೆಯವರ ಕಾಲು ಹಿಡಿದು ಬೇಡುತ್ತೇವೆ
ಹೊಂಬೆಳಕಲ್ಲಿ ಈಶನಿದ್ದರೂ ಗತ್ತಲಿರುವ ಪಯಣಿಗರ ಕಾಲು ಹಿಡಿದು ಬೇಡುತ್ತೇವೆ
ಒಲುಮೆಯಲ್ಲಿ ಪ್ರಣಯವಿದ್ದರೂ ನಿಂತಿದ್ದ ಚೆಲುವೆಯರ ಕಾಲು ಹಿಡಿದು ಬೇಡುತ್ತೇವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ನವೆಂಬರ್ ೨೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೩, ೨೦೨೬