ಎಲ್ಲೂ ಮೌನವು ಎಲ್ಲಿಯ ಧ್ಯಾನವು ಸೋತು ಹೋಗಿದೆ ಬಂಧನಾ ಮತ್ತೆ ವಸಂತವು ಚಿಗುರಿ ಕರೆದರೂ ಭಾವವಿಲ್ಲದ ಜೀವನಾ   ವಯಸ್ಸು ಮಾಗಿದೆ ಚೆಲುವು ಸೊರಗಿದೆ ತ್ರಾಣ ಉಡುಗಿದ ಚೇತನಾ ಒಲಿವ ಕಣ್ಣಲಿ ರಶ್ಮಿ ಕಾಣದೆ ಬದುಕ ಬಂಡಿಲಿ ತಲ್ಲಣಾ   ದೇಹ ಒಳಗಡೆ ರೋಗ ರುಜಿನವು ನಲ್ಲೆ ಜೊತೆಗೆ ನಿಂತೆನಾ ಕುಂತು ಏಳಲು ಶಕ್ತಿ ಇಲ್ಲವು ಯಾರ ಒಲುಮೆಯ ಕಾಣೆನಾ   ಮನವು ಬಾಡಿದೆ ಹೃದಯ ನರಳಿದೆ ಸಾಕು ಎನಿಸಿದೆ ಚೇತನಾ ಭವದ ಸುತ್ತಲು ನೋವೆ ಕಾಣಲು ಬಾನ ಬಯಲಿಗೆ ಹೊರಟೆನಾ   -ಹಾ. ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ