ಹನಿಗಳು ಸರ್ ಹನಿಗಳು !
ಬರಹಗಾರರ ಬಳಗ
ಡಿಸೆಂಬರ್ ೨೮, ೨೦೨೫
೫ ವೀಕ್ಷಣೆಗಳು
ಮಣ್ಣಿನಡಿಯೆ
ಬೆಳ್ಳಿ ಬಂಗಾರ ಸಿಗೆ
ನಮಗೆ ಹೊಗೆ !
*
ಪ್ರಪಂಚದಲ್ಲಿ
ಧರ್ಮಕ್ಕೆ ಬೈಸಿಕೊಂಡ
ಧರ್ಮವೇ ಹಿಂದೂ !
*
ಪ್ರಪಂಚದಲ್ಲಿ
ಎಲ್ಲರನ್ನೂ ತಬ್ಬಿದ
ದೇಶ ಭಾರತ !
*
ದೇಶದೊಳಗೆ
ಭಾವನಾತ್ಮಕ ರಾಜ್ಯ
ಕರ್ನಾಟಕವು !
*
ತಿನ್ನುವುದನ್ನ
ಕೊಬ್ಬದು ಬೇಕೆಯಿಂದು
ಓ ಮೈ ಶುಗರ್ !
*
ಒಂಟಿತನವು
ಬೇಸರ ದುಮ್ಮಾನವು
ತಾಳಿ ಕಟ್ಟಿರಿ !
*
ಚಿಪ್ಪು ಜೊತೆಗೆ
ಮುತ್ತಿನ ಚಿಪ್ಪಿನಂತೆಯೇ
ಸಿಮ್ ಚಿಪ್ಪೊಂದಿದೆ !
*
ಕರಿ ನೆರಳು
ನನ್ನನ್ನೇ ನೋಡಿತಿಂದು
ಹಲ್ಲು ಕಿಸಿದು !
*
ಕತ್ತಲಿನಲ್ಲೇ
ದೇಶವು ಬೆಳಗಿತು
ಕೋಟಿ ಕೋಟೆಯು !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಡಿಸೆಂಬರ್ ೨೮, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬