ಒಂದು ಗಝಲ್
ಬರಹಗಾರರ ಬಳಗ
ಡಿಸೆಂಬರ್ ೩೧, ೨೦೨೫
೬ ವೀಕ್ಷಣೆಗಳು
ಪ್ರೀತಿ ಒಳಗಿನ ಅರ್ಥ ಸಮಾಜದಿಂದ ಕಲಿತೆ ಗಾಲಿಬ್
ಬಾಳುವ ಕಲೆಯನು ಶಿಕ್ಷಣದಿಂದ ಕಲಿತೆ ಗಾಲಿಬ್
ಬೇಸರವೇ ಇಲ್ಲದೆ ಬದುಕುವ ಕಲೆ ಎಲ್ಲಿದೆ ಹೇಳು
ಕಷ್ಟವೇ ಇಲ್ಲದೆ ಇಂದು ಮನದಿಂದ ಕಲಿತೆ ಗಾಲಿಬ್
ನಿನ್ನ ಹೆಸರಿನಿಂದ ಪ್ರಣಯವು ಹೇಗೆ ಸಾಗಿದೆಯಿಂದು
ಸುಖದಲ್ಲಿಯ ಪಾಠವ ಜತನದಿಂದ ಕಲಿತೆ ಗಾಲಿಬ್
ಮದಿರೆಯ ಸ್ನೇಹಾಚಾರವನು ನೀ ಆರಾಧಿಸುತ ಕುಳಿತೆ
ಉದರಕೆ ಬೇಕಾದ್ದನ್ನು ಸಂಬಂಧದಿಂದ ಕಲಿತೆ ಗಾಲಿಬ್
ನೀನಿತ್ತ ಕೊಡುಗೆಗಳ ಬಳಸಿ ಸಾಗುತಿಹನಿಂದು ಈಶ
ಸವಿಯಾದ ಒಲವನ್ನು ಹೃದಯದಿಂದ ಕಲಿತೆ ಗಾಲಿಬ್
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಡಿಸೆಂಬರ್ ೩೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬