ಹುತಾತ್ಮರ ದಿನ
ಬರಹಗಾರರ ಬಳಗ
ಜನವರಿ ೩೦, ೨೦೨೬
೫ ವೀಕ್ಷಣೆಗಳು
ದೇಶದ ಆಡಳಿತ ವೈಖರಿಯ ದೊರಕಿಸಿದ ಮಹಾತ್ಮ
ಸತ್ಯ ಅಹಿಂಸೆ ತ್ಯಾಗವೇ ನಿನ್ನ ಅಸ್ತ್ರ
ಗುಂಡೇಟಿಗೆ ಬಲಿಯಾಗಿ ಹುತಾತ್ಮನಾದ ಬಾಪು
ನೆನೆವೆವೀ ದಿನ ಸ್ಮರಿಸುತ ಆದರ್ಶಗಳ
ಸರ್ವೋದಯದ ಅಲೆಗಳ ಪ್ರವಾಹ
ವಿನೋಬಾ ಬಾವೆಯವರ ನುಡಿಗಳ ಸಾರ
ಸ್ವಚ್ಛತೆಗೆ ಒತ್ತು ದೇಶದ ಜನತೆಯ ಆರೋಗ್ಯ
ಅಹಿಂಸೆ ಧೀರರ ಮೇಧಾವಿಗಳ ಮನದ ದೃಢತೆ
ದಾರಿಯಲಿ ಗುರಿಯನು ಗುರುತಿಸಿದ ಮಹಾನುಭಾವ
ಬದುಕಿನ ಕೊಂಡಿ ದೇವರ ಅಸ್ಥಿತ್ವದ ಅರಿವಿರಲಿ
ಶೀಲವಿಲ್ಲದ ಜ್ಞಾನ ಕನ್ನಡಿಯೊಳಗಣ ಗಂಟೆದಿರಿ
ರಸ್ತೆಯಲಿರುವ ಹಳ್ಳತಿಟ್ಟುಗಳ ಸೂಕ್ಷ್ಮವಾಗಿ ಅವಲೋಕಿಸಿರೆಂದಿರಿ
ನೋವು ಯಾತನೆಯಲೂ ರಾಮತಾರಕ ಮಂತ್ರ ಜಪಿಸಿದಿರಿ
ರಾಮರಾಜ್ಯದ ಕನಸು ಬರಿಯ ಕನಸಾಗಿಯೇ ಹೋಯಿತು
ಹಾದಿ ಬೀದಿಯಲೆಲ್ಲ ಭ್ರಷ್ಟಾಚಾರ ನಲಿದಾಡಿತು
ಕಂಡು ಕೇಳರಿಯದ ಘಟನೆಗಳು ನಲಿದಾಡಿತು
ದೇಶ ರಕ್ಷಣೆಯ ವೀರ ಯೋಧರ ಅಭಿಮಾನ
ಸರ್ವ ಸುಖಗಳ ತ್ಯಾಗದ ಜೀವನದ ಇತಿಹಾಸ
ಬಲಿದಾನದ ಹಿಂದಿನ ಕರಾಳ ಸತ್ಯಗಳು
ಮಳೆ ಚಳಿ ಬಿಸಿಲಿನ ಝಳದ ವೈಪರೀತ್ಯಕೆ ಅಂಜದ ಗುಂಡಿಗೆಯವರು
ಧೀರತ್ವದ ವೀರತ್ವದ ಹುತಾತ್ಮ ಸೈನಿಕರಿಗೆ ನಮನಗಳು
ರಾಷ್ಟ್ರಭಕ್ತಿ ಯುವಶಕ್ತಿ ಬಲಿದಾನದ ರಾಷ್ಟ್ರೀಯ ನಾಯಕರಿಗೆ ವಂದನೆಗಳು
ಭಗತ್ ಸಿಂಗ್ ಸುಖದೇವ್ ರಾಜಗುರ್ ಕ್ರಾಂತಿವೀರರಿಗೆ ಶ್ರದ್ಧಾಂಜಲಿ ದಿನ
ಮೌನ ಗೌರವ ಸಮರ್ಪಣೆ ನುಡಿನಮನ ಸಲ್ಲಿಸೋಣ
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೩೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬