ಮೋಹ ಕರೆಯಲೇ ಏಕೆ ನೀ ಇರುವಾಗ ಸಖಿ ದಾಹ ತಣಿಯಲೇ ಬೇಕೆ ಬಳಿ ಬರುವಾಗ ಸಖಿ   ನೋವ ಪಡೆಯಲೇ ಬಂತೆ, ಪ್ರೀತಿ ಮೆರೆವಾಗ ಸಖಿ ಭಾವ ಅರಿಯಲೇ ಕುಂತೆ, ಸಂತೆ ಬಿರಿವಾಗ ಸಖಿ   ಜೀವ ಜೊತೆಯಲೇ ಸಾಗೆ, ನನಸು ಅರಿವಾಗ ಸಖಿ ಸಾವ ಸರಿಯಲೇ ಬಾಗೆ, ಪ್ರೇಮ  ಮುರಿವಾಗ ಸಖಿ   ದಾರಿ ಕರೆಯಲೇ ಉಂಡೆ,ನಿಂತು ಜರಿವಾಗ ಸಖಿ ಸೇರಿ ಬೆರೆಯಲೇ ಕಂಡೆ, ಚಿಂತೆ ಸುರಿವಾಗ ಸಖಿ   ಈಶ ಬೆಸೆಯಲೇ ಇಲ್ಲೆ,ಚಿತೆಯ ತರುವಾಗ ಸಖಿ ಆಸೆ ಸವಿಯಲೇ ಬಲ್ಲೆ, ಮೇಲೆ ಹೊರುವಾಗ ಸಖಿ   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ