ಬರಹ ಕ್ಕೆ ಬರ ಬರಬಾರದು ! * ಬರಹದ ತೂಕ ಕಳಕೊಂಡ ಕ್ಷಣ ಬರಹಗಾರ ಮೌನಿ ! * ಬರಹಗಳಲ್ಲಿಯ ದೋಷಗಳ ಹೇಳಿ ಸ್ನೇಹ ಕಳೆದುಕೊಳ್ಳಬೇಡಿ ! * ಕಪ್ಪು ಬೊಟ್ಟಿಗೂ ಮಹತ್ವ ಇದೆ ಗ್ರಹಣ ಬಂದಾಗ ! * ಚಿಂತಕರ ಚಿಂತನೆ ಓದುಗರಿಗೆ ಮಾತ್ರ ! * ಈಗಿನ ಯುವ ಜನತೆ, ಜೊತೆಗೆ  ನಮಗೆಲ್ಲ ಬಹಳ ತಿಳಿದಿದೆ  ಎನ್ನುವವರ ನಡುವೆ ಹಿರಿಯರೆಂದೆನಿಸಿಕೊಂಡವರು ಸುಮ್ಮನೆ ಇರುವುದೇ ಲೇಸು! * ಬದುಕಲ್ಲಿ ಕತೆಗಳು ಸೃಷ್ಟಿಯಾಗಲಿ , ನೋಡು ನೋಡುತ್ತಾ ಬಾಳೊಂದು ಕಾದಂಬರಿಯಾಗುತ್ತದೆ ! * ಒಂದು ಕಡೆ ಗಂಡ ಇನ್ನೊಂದು ಕಡೆ ಹಣದ ಚೀಲವಿಟ್ಟು ಹೆಣ್ಣನ್ನು ಬಿಟ್ಟಲ್ಲಿ ಮೊದಲು ಹಣದ ಚೀಲವ ಪಡೆದು ನಂತರವೇ ಗಂಡನ ಕೈ ಹಿಡಿದು ಮುನ್ನಡೆವಳು ಸತಿಯು !  * ಕೂಸುಗಳಲ್ಲಿ ನೂರಾರು ಕನಸಿದೆ ಕಾಸುಗಳಲ್ಲೂ ! -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ