ಸಾಧಿಸಿ ತೋರಿಸಿ! ಅದು ಕೆಟ್ಟದ್ದು ಇದು ಕೆಟ್ಟದ್ದು  ಎಂಬುದರ ಜೊತೆಗೆ  ನಿಮ್ಮದು ಒಳ್ಳೆಯದು  ಯಾವುದೆಂದೂ ತೋರಿಸಿ!   ಅವರು ಕೆಟ್ಟವರು ಇವರು ಕೆಟ್ಟವರು  ಎಂಬುದರ ಜೊತೆಗೆ  ನೀವೆಷ್ಟು ಒಳ್ಳೆಯವರು  ಎಂಬುದನ್ನೂ ತೋರಿಸಿ!   ಸಾಧ್ಯವಾದರೆ  ಜೀವನದಲ್ಲಿ ಒಂದಷ್ಟು  ಒಳ್ಳೆಯದನ್ನು ಸಾಧಿಸಿ!  ಒಳ್ಳೆಯದನ್ನು ಸಾಧಿಸಿ ತೋರಿಸಿ!   *** ಮಳೆಯಾಗುವಂತೆ! ಮೋಡಗಳಿಂದ ಮಳೆಯಾಗುವಂತೆ  ಈ ನಿನ್ನ ಪ್ರೇಮವು!  ಮೋಡಗಳಿಂದ ಗುಡುಗಾಗುವಂತೆ  ಈ ನಿನ್ನ ಹುಸಿ ಕೋಪವು!  ಮೋಡಗಳಿಂದ ಸಿಡಿಲಾಗುವಂತೆ  ಈ ನಿನ್ನ ಮುನಿಸಿನ ರೋಷವು!   ಮೋಡಗಳಿಂದ ಮಿಂಚಾಗುವಷ್ಟೇ  ಇರಲಿ ನಿನ್ನ ಮನದ ಮುನಿಸು!  ಮೋಡಗಳಿಂದ ಮಳೆಯಾಗುವಂತೆ  ಪ್ರೇಮಿಸಿ ಎನ್ನೆದೆಯ ತಣಿಸು!  ಮೋಡಗಳಿಂದ ಬೆಳೆಯಾಗುವಂತೆ  ನಮ್ಮಿ ಬಾಳ ಸಂಭ್ರಮದಿ ಬೆಳೆಸು! -ಮೌನಮುಖಿ ಚಿತ್ರ ಕೃಪೆ: ಇಂಟರ್ನೆಟ್ ತಾಣ