ಮೌನ
ಬರಹಗಾರರ ಬಳಗ
ಫೆಬ್ರವರಿ ೨೭, ೨೦೨೬
೫ ವೀಕ್ಷಣೆಗಳು
ಮೌನವಿಂದು ತುಂಬಿ ಹೋದೆ
ಮಾನ ಕಳೆದ ಸಮಯದಿ
ಮೀನ ಮೇಷವೆಣಿಸಿ ತುಳಿದೆ
ಮೇಣ ಸವರಿ ತುಪ್ಪಿದಿ
ಕಾಣಲಿಲ್ಲ ಜನರಿಗದುವು
ಕಾಣೆಯಾದ ದಿನದಲಿ
ಕೋಣೆಯೊಳಗೆ ನನ್ನ ಇರುವು
ಕಾಣಿಸದೆಯೆ ನಿನ್ನಲಿ
ದೂರದೂರದೊಳಗೆ ಕುಳಿತು
ದೂರವಾದೆ ಏತಕೆ
ದೂರುಗಳನು ಕೊಟ್ಟೆ ನಡೆದು
ದೊರಗು ನೆಲದಿ ಮಲಗಿದೆ
ತಪ್ಪು ಮಾಡದಿರಲು ನನಗೆ
ತಪ್ಪುಗಳನೆ ಹೇಳಿ ಕೊಟ್ಟೆ
ತಪ್ಪಿಲ್ಲದ ನಡತೆಯೊಳಗೆ
ತಪ್ಪುಗಳನೆ ನಂಬಿ ಕೆಟ್ಟೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೨೭, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬