ಇತ್ತೀಚಿನ ದಿನಗಳಲ್ಲಿ ,  ಕವಿಯೆನಿಸಿದ ಬುರುಡೆ ದಾಸನು ತಾನೊಬ್ಬನೇ  ಬರೆಹಗಾರ ಎನ್ನುತ್ತಾ, ಗಲ್ಲಿ ಗಲ್ಲಿಗಳಲ್ಲಿ  ಎಲ್ಲೆಂದರಲ್ಲಿ  ಏನೇನೋ  ಬರೆಯುತ್ತಾ ತಿರುಗುತ್ತಿದ್ದಾನೆ ಎಚ್ಚರ ಓದುಗ ಎಚ್ಚರ !   ತನುವೊಳಗೆ  ತಾನೊಬ್ಬನೇ ಸುಬಗ  ಬರಹಗಾರನು ಎನ್ನುತ್ತಾ, ಬೆಳೆಯುತ್ತಿರುವ ಇನ್ನೊಬ್ಬನ  ತುಳಿಯಲು ಉಪಯೋಗಿಸುವ ತನ್ನ ಲೇಖನಿಯ !  ಕೊನೆಗೆ  ವಟಗುಟ್ಟುವ ಕಪ್ಪೆಯಂತೆ ಬಾವಿಯೊಳಗೇ  ಉಳಿಯುವನವನು ಎಚ್ಚರ ಓದುಗ ಎಚ್ಚರ !   ವಿದ್ಯೆ, ಕಲಿತರೂ ಇವನಿಗೆ  ಬುದ್ದಿ ಬರಲಿಲ್ಲ, ಬುದ್ದಿ ಬರುವಾಗ  ವಿದ್ಯೆ ಮರೆತನಂತೆ ಮತ್ತೆ ಕೇಳಬೇಕೇ ? ಬರೆದ ಬರೆಹಗಳೆಲ್ಲ  ತೌಡು ಕುಟ್ಟಿದಂತೆ ಎಚ್ಚರ ಓದುಗ ಎಚ್ಚರ!   ಅಹಂನಿಂದ ಹೊರ ಬಾ ಕಲಿತಿರುವುದಕ್ಕೆ, ಕಲಿಸಿದವರಿಗೆ ಶರಣಾಗು ಪುಡಿ ಬರಹಗಾರರ ಕೂಟಕ್ಕೆ  ನೀನು, ಸೇರದಿರು ಕಾರಣ ನೂರಾರು ಕೊಡಬಲ್ಲೆ ! ಏನೋ ಲಾಗ ಹೊಡೆದು  ಹೊರತಂದಿರುವ ಪುಸ್ತಕಗಳು  ಮನೆಯ ಕಪಾಟಿನಲ್ಲಿ  ಓದುಗರಿಲ್ಲದೆ ಬೂಸಾ ಆಗಿರಬಹುದು  ? ಎಚ್ಚರ ಓದುಗ ಎಚ್ಚರ! -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ