ಮನುಜನೂ ಕಪಿಯಂತೆ !
ಬರಹಗಾರರ ಬಳಗ
ಮಾರ್ಚ್ ೦೪, ೨೦೨೬
೮ ವೀಕ್ಷಣೆಗಳು
ಕಪಿ , ಮರದಿಂದ ಮರಕ್ಕೆ ಹಾರುವುದು
ಮನುಜ, ಒಂದು ರೀತಿಯಲ್ಲಿ
ಮನದಿಂದ ಮನಕ್ಕೆ ಲಾಗ ಹಾಕುತ್ತಾ ಹಾರುವನು
ಮನುಜನೂ ಕಪಿಯಂತೆ !
ಕಪಿ, ಚೇಷ್ಟೆ ಮಾಡುವುದು
ಮನುಜ , ತನ್ನ ಇರುವಿಕೆಯನ್ನು ತೋರ್ಪಡಿಸಲು
ಬಹು ಚೇಷ್ಟೆಗಳ ಮಾಡುವನು
ಮನುಜನೂ ಕಪಿಯಂತೆ !
ಕಪಿ , ತನ್ನ ಮೈಯನ್ನು ತಾನೇ ಪರಚಿಕೊಳ್ಳುವುದು
ಮನುಜ , ತನ್ನದಲ್ಲದ ವಿಷಯಗಳಿಗೆ
ವಿಚಾರಗಳಿಗೆ ,ಮೈ ಮನಸುಗಳ ಪರಚಿಕೊಳ್ಳುವನು
ಮನುಜನೂ ಕಪಿಯಂತೆ !
ಕಪಿ, ಬೇಗ ದುರ್ಬುದ್ಧಿಗಳ ಕಲಿಯುವುದು
ಮನುಜ , ಬಹಳ ಬುದ್ಧಿವಂತ
ಬೇಗನೆ ದುರ್ಬುದ್ಧಿಗಳ ದಾಸನಾಗುವನು
ಹೀಗೇ ಇದು, ಮುಗಿಯದ ಕಥೆ !
ಮನುಜನೂ ಕಪಿಯಂತೆ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೦೪, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬