ನಿನ್ನ ಹೃದಯ ಸ್ನೇಹವನ್ನು ನನ್ನಯ ಒಲವಿನಲಿ ನೋಡಿದೆ ಸೂರ್ಯನುದಯ ಜಗಕೆ ಬೆಳಕು ಚೆಲುವಿನಲಿ ನೋಡಿದೆ   ರಾತ್ರೆಯಾಗೆ ಚಂದ್ರಮನ ಬೆಳದಿಂಗಳು ಸುಡುತಿದೆಯೇಕೆ ಸವಿಯಾಸರೆ ಸಿಗುತಲೇ ನನಸನು ಗೆಲುವಿನಲಿ ನೋಡಿದೆ   ಸುಂದರವು ಅತಿಯಾದ ಮಧುರವು ಜೇನ ಹನಿಯ ಹಾಗೆಯೆ ಗಂಧದ ಪರಿಮಳದ ರೀತಿಯೇ ಮೋಹಕ ನಗುವಿನಲಿ ನೋಡಿದೆ   ಚಂದದ ಅರಮನೆಯೊಳಗೆ ಅರಳಿರುವ ಪುಷ್ಪಗಳು ಕಂಡಿವೆ ನಲ್ಲೆಯ ನಲುಮೆಯನು ಗಿರಿಶಿಖರಗಳ ನಲಿವಿನಲಿ ನೋಡಿದೆ   ಕೈಹಿಡಿಯುತ ಬರಸೆಳೆಯುತ ಹೀಗೆಯೇ ಬಿಗಿದಪ್ಪಿದೆ ರತ್ನಳನು ಹತ್ತಿರ ನಿಂತಿಹ ತಾರೆಯ ಸೌಂದರ್ಯ ತನುವಿನಲಿ ನೋಡಿದೆ -ರತ್ನಾ ಭಟ್ ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ