ಒಂದು ಗಝಲ್
ಬರಹಗಾರರ ಬಳಗ
ಮಾರ್ಚ್ ೧೫, ೨೦೨೬
೪ ವೀಕ್ಷಣೆಗಳು
ನೀನಿಲ್ಲದೆ ಗೆಲುವು ಬರುವುದೇ ಸಖಿ
ನಾನಿಲ್ಲದೆ ಮನವು ಒಲಿವುದೇ ಸಖಿ
ಸ್ಥಳವಿಲ್ಲದೆ ಯಾನವು ಸಾಗುವುದೇ ಸಖಿ
ಬುಡವಿಲ್ಲದೆ ಮರವು ಉಳಿವುದೇ ಸಖಿ
ಮತ್ಸರಿಯದೆ ತನುವು ಇರುವುದೇ ಸಖಿ
ಮಧುವಿಲ್ಲದೆ ಜೀವವು ಸೇರುವುದೇ ಸಖಿ
ಜೀವನದೆ ಪಂಥವು ಮೆರೆಯುವುದೇ ಸಖಿ
ಸವಿಯದೆ ಅರಿವು ಮೂಡುವುದೇ ಸಖಿ
ಈಶನಿಲ್ಲದೆ ಭಯವು ಕಾಣುವುದೇ ಸಖಿ
ನನಸಿಲ್ಲದೆ ಚೈತ್ರವು ತಬ್ಬುವುದೇ ಸಖಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೧೫, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬