ಒಂದು ಗಝಲ್
ಬರಹಗಾರರ ಬಳಗ
ಮಾರ್ಚ್ ೨೮, ೨೦೨೬
೫ ವೀಕ್ಷಣೆಗಳು
ನಿನ್ನ ಕೈಹಿಡಿದು ನಾ ,ಬರುವೆನು ಜೊತೆಗೆ
ಬಾಳ ಪಯಣದಲಿ ನಾ , ಇರುವೆನು ಜೊತೆಗೆ
ಪ್ರೀತಿ ತುಂಬಿದಾ ಗಳಿಗೆ , ಹೇಳು ಹೆಸರಲೇನಿದೆ
ತನುವಿನಾ ನೊವನು ಎಲ್ಲಾ, ಮರೆವೆನು ಜೊತೆಗೆ
ಪ್ರಣಯ ಒಂದೊಂದು ಸವಿಯಾ ,ಕೇಳುವೆಯಲ್ಲೇ
ನನಸ ಒಡೆತನದ ನಡುವೆ ,ಮೆರೆವೆನು ಜೊತೆಗೆ
ಶೋಕ ಮರೆಸಿದಾ ಸಮಯ ,ಬಳಿಯಲ್ಲೇ ಇರುವೆ
ಯಾರು ಕೊಡದಿರುವ ಒಲವಾ, ತರುವೆನು ಜೊತೆಗೆ
ಹೃದಯದಾ ಒಳಗಿನ ಭಾವ , ಕಾಣೆಯೇನು ವೀಣೆ
ಮಧುರ ಪ್ರೇಮವನೂ ಮೀಟಿ , ಬೆರೆವೆನು ಜೊತೆಗೆ
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೨೮, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬