ನಿನ್ನ ನಗೆ ಮನಮೋಹಕ.
ಬರಹಗಾರರ ಬಳಗ
ಮಾರ್ಚ್ ೨೯, ೨೦೨೬
೭ ವೀಕ್ಷಣೆಗಳು
ತನುವ ತಾರೆ ನಗುವ ತೋರೇ
ಭುವಿಯ ತುಂಬಲಿ
ಹೊನ್ನದಾವರೆ ಹೊದಿಕೆ
ಶುಭ್ರನೀಲಾಗಸದ ಬಿಂಬ ಹೊತ್ತ ನೀರೆ
ಸನಿಹ ಬಾರೆ ಶ್ವೇತಮನದ ವರ್ಣಿಕೆ.
ಸಕಲ ಜೀವಕೆ ಸೌಖ್ಯದಾತೆ
ನಿನ್ನ ಒಡಲದು ಹೊಂದಿಕೆ
ಮನದ ಭಾವಕೆ ಪ್ರೇಮಧಾತೆ
ಇರದು ನಿನ್ನಲಿ ತೋರಿಕೆ.
ನಿತ್ಯ ನಿರ್ಮಲ ಅಲೆಯ ಚಂಚಲ
ಇಳಿದ ನಾವೆಗೆ ಕೊಡುವೆ ಕಂಪನ
ಗುರಿಯ ಸೇರಲು ಕರುಣೆ ತೋರುವ
ಮಾತೃ ಮಮತೆಯೂ ನಿನ್ನದು.
ಎಳೆಯ ಮಾವಿನ ಚಿಗುರು ಮೋಹಕ
ನಿನ್ನ ಒಲವಿನ ಪರಿಮಳ
ಸರ್ವ ಋತುವಿಗೂ ನೀನೆ ಕೊನೆ ಮೊದಲು
ಭುವಿಯ ಒಡಲಿನ ಕಬ್ಬಿನಂದದಿ
ನಿನ್ನ ಒಲವದು ಪ್ರೇರಕ.
-ವಿಮಲಾರುಣ ಪಡ್ಡಂಬೈಲು, ಸುಳ್ಯ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೨೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬