ಹನಿಗಳು ಸರ್ ಹನಿಗಳು !
ಬರಹಗಾರರ ಬಳಗ
ಮಾರ್ಚ್ ೩೦, ೨೦೨೬
೭ ವೀಕ್ಷಣೆಗಳು
ಬದುಕೇ ಬವಣೆಯೆಂದು ಹೇಳುತ್ತೇವೆ
ತಾಳ್ಮೆಯೆಂದೂ ಇರದೆಯೇ ಬಾಳುತ್ತೇವೆ
ಕನಸು ನನಸುಗಳ ಜೊತೆ ಜೋತೆಯಲಿ
ಲೋಕವನು ಬಿಡುತ ಹಾಗೇ ತೆರಳುತ್ತೇವೆ
*
ಕೋಟು ಧರಿಸಿ
ಕೋಟಿಯೊಡನೆ
ತಿರುಗುವವಗೆ
ದಾನ ಮಾಡಬೇಕು
ಎಂಬಾಸೆ ಇರದೆ
ಮತ್ತಷ್ಟೂ ಗಳಿಸಬೇಕು
ಎಂಬಾಸೆ ಇರುತ್ತದೆ.
ಅದೇ, ಕೋಟಿಲ್ಲದೆ
ತುತ್ತು ಅನ್ನಕ್ಕೂ
ಗತಿ ಇಲ್ಲದವನಿಗೆ
ದುಡಿದು ತಿನ್ನುವ ಜೊತೆಗೆ
ಇದ್ದುದರಲ್ಲೇ
ದಾನ ಮಾಡಬೇಕು
ಎಂಬಾಸೆ ಇರುತ್ತದೆ!
*
ಮನವಿಹುದು
ತನುವೊಳಗೆ ,ನೀನು
ತಿಳಿಯಾಗಿಸು !
*
ಹಳಿಯ ಮೇಲೆ
ಸಾಗಿದಂತೆ , ನೀ ರೈಲು
ಬಿಡಬೇಡವೊ !
*
ಕಣ್ಣೀರಿನಲ್ಲಿ
ಕೈ ತೊಳೆದೆ ನಾನಿಂದು
ನೀನೆಲ್ಲಿ ಸಿಂಧೂ !
*
ಗಂಡಸು ಇಂದು
ರಮಣಿಯ ಎದುರು
ಒಣ ಕೊಂಬೆಯು !
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೩೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬