ಹಸಿದಿರುವ ಹೃದಯದಲಿ, ಕನಸುಗಳ ಕಂಡಿರುವೆ ಸವಿಯು ಆರದೆ ಇರಲು, ದಿನಗಳ ಕಂಡಿರುವೆ    ಚೆಲುವ ಚಂದ್ರನ ನೋಟ, ತಾರೆಯೊಳು ಕಂಡೀತೆ ಋತು ಅಮಲಿನ ಆಗಮನಕೆ, ಕಿರಣಗಳ ಕಂಡಿರುವೆ    ಮಹಲಿನ ಅರಮನೆಯೊಳಗೆ,ಪ್ರೀತಿ ಒಲವಿನ ಸಖಿ ಚಿತ್ತಾರ ತಳೆದಿಹ ಬಯಕೆ, ನನಸುಗಳ ಕಂಡಿರುವೆ   ರಾತ್ರಿ ಬಯಕೆಯ ಮೋಡ,ಜಲವಾಗಿ ಸುರಿಯುತಿದೆ  ಮನದ ಒಳಗಿನ ಭಾವ,ಮಿಂಚುಗಳ ಕಂಡಿರುವೆ   ಬಾನೇತ್ತರ ಸವಿಯ ಸುಖ,ರತಿಯಾಗಿದೆಯೊ ಈಶ ಭೇದ ಎಣಿಸುವ ಕಡೆಯೂ,ರಶ್ಮಿಗಳ ಕಂಡಿರುವೆ   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ