ಕಾಲದ ಜೊತೆ ಪಯಣ
ಬರಹಗಾರರ ಬಳಗ
ಏಪ್ರಿಲ್ ೦೭, ೨೦೨೬
೮ ವೀಕ್ಷಣೆಗಳು
ಕಾಲದ ಜೊತೆ ನಡೆವ ಪ್ರಯಾಣಿಕ
ಸಮಯದ ಮೌಲ್ಯ ತಿಳಿದ ಸಾಧಕ
ನಕಾರಾತ್ಮಕ ಚಿಂತನೆ ಏಳೆಗೆ ಮಾರಕ
ಸಕಾರಾತ್ಮಕ ಮನವು ಜ್ಞಾನಕ್ಕೆ ಪೂರಕ
ಸಮಯದ ಸಹನೆ ನಿನ್ನಲ್ಲಿ ಇರಲಿ
ನಿನಗೆ ಅವಕಾಶಗಳು ಬೆಂಬತ್ತಿ ಬರಲಿ
ಜಗವು ನಿನ್ನನು ನೋಡಿ ಕಲಿಯಲಿ
ಜನರಿಗೆ ನಿನ್ನ ಜೀವನ ಪ್ರೇರಣೆಯಾಗಲಿ
ಕಾಲದ ಜೊತೆ ನಿನಗಿರಲಿ ನಂಟು
ಸಾಧಿಸುವ ಛಲ ನಿನ್ನಲ್ಲಿ ಉಂಟು
ಬದುಕು ಏಳು ಬೀಳುಗಳ ಗಂಟು
ಸಮಾಜದಲ್ಲಿ ಇರಲಿ ಸಾಮರಸ್ಯದ ಅಂಟು
ಸಾಧಕನಿಗೆ ಸಾಧಿಸಲು ಸಮಯವು ಸಕಾಲ
ಭರವಸೆಗೆ ಎಂದಿಗೂ ಬಾರದಿರಲಿ ಬರಗಾಲ
ಆತ್ಮವಿಶ್ವಾಸ ನಂಬಿಕೆ ಇದ್ದರೆ ಉಳಿಗಾಲ
ಕಲಿಯುತ್ತಾ ಮುಂದೆ ಸಾಗು ಇದು ಕಲಿಗಾಲ.
-ಗೀತಾ ಲೋಕೇಶ್, ಕಲ್ಲೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಏಪ್ರಿಲ್ ೦೭, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬