ಭಿನ್ನತೆಯಲ್ಲಿ ಸಮರಸ
ಶ್ರೀರಂಗಪಟ್ಟಣ ಜಗನ್ನಾಥ ಮೂರ್ತಿ ರಾಘವೇಂದ್ರ
ಏಪ್ರಿಲ್ ೧೩, ೨೦೨೬
೯ ವೀಕ್ಷಣೆಗಳು
ನಾಮ ಒಂದೆ, ರೂಪ ಒಂದೆ.
ಗುಣ ಬೇರೆ, ಕ್ರಿಯೆ ಬೇರೆ.
ಕರವೆರಡು ರೂಪ ಒಂದೆ.
ಎಡ ಬಲ ತರತಮ ಕ್ರಿಯೆ ಬೇರೆ.
ಕಾಲೆರಡು ರೂಪ ಒಂದೆ.
ಒಂದರ ಹಿಂದೆ ಒಂದು ಅಡಿಯಿಡೆ ನಡಿಗೆ.
ಕಣ್ಣಗಳೆರಡು ದೃಶ್ಯ ಬೇರೆ.
ನೋಡಲೊಂದು, ಗಮನಿಸಲೊಂದು.
ಕಿವಿಯೆರಡು ಸದ್ದು ಒಂದೆ.
ಕೇಳಲೊಂದು, ಆಲಿಸಲೊಂದು..
ನಾಸಿಕ ಒಂದೆ, ವಾಸನೆ ಹಲವು.
ನಾಲಿಗೆ ಒಂದೆ, ರುಚಿ ಹಲವು.
ಅದು ಹಾಗೇಕೆ? ಇದು ಹೀಗೇಕೆ?
ಅದರ ಗೊಡವೆ ನಮಗೇಕೆ?
ಸೃಷ್ಟಿಯಲಿಹುದು ವಿವಿಧತೆ,
ಭಿನ್ನತೆ, ತರತಮ, ಸಮರಸ.
-ಎಸ್.ಜೆ.ರಾಘವೇಂದ್ರ ✍️
ಪ್ರಕಟಿಸಿದ: ಏಪ್ರಿಲ್ ೧೩, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬