ಸ್ಟೇಟಸ್ ಕತೆಗಳು (ಭಾಗ ೧೫೯೭) - 25
ಬರಹಗಾರರ ಬಳಗ
ಫೆಬ್ರವರಿ ೨೦, ೨೦೨೬
೧೭ ವೀಕ್ಷಣೆಗಳು
ಹಾಗೆ ಕಣ್ಣ ಮುಂದೆ ಹಾದು ಹೋಗುವ ಎಲ್ಲರೂ ಒಂದೇ ವಯಸ್ಸಿನವರು. ಒಬ್ಬೊಬ್ಬರದ್ದು ಒಂದೊಂದು ದಿಕ್ಕಿನ ಕಡೆಗೆ ಸಾಗುವ ಬದುಕು, ಆ ರಸ್ತೆ ಕೆಲಸದಲ್ಲಿ 25 ವರ್ಷದ ಅವನು ಮಣ್ಣು ಹೊರುತ್ತಿದ್ದಾನೆ, ಅದೇ 25 ವಯಸ್ಸಿನ ಇನ್ನೊಬ್ಬ ಆ ಕೆಲಸವನ್ನು ನಿಂತು ನೋಡುತ್ತಿದ್ದಾನೆ ಇನ್ನೊಬ್ಬ ಅಂಗಡಿಯ ಮುಂದೆ ನಿಂತು ಸಿಗರೇಟ್ ಸೇದುತ್ತಿದ್ದಾನೆ, ಇನ್ನೊಬ್ಬ ಬದುಕಿನ ಜಂಜಾಟಕ್ಕೆ ಜಗಳ ಶುರು ಹಚ್ಚಿಕೊಂಡಿದ್ದಾನೆ, ಸಂಸಾರಸ್ಥನಾಗಿ ಜೀವನ ಮುಂದೇನು ಅಂತ ಯೋಚಿಸ್ತಾ ಇದ್ದಾನೆ, ಇನ್ನೊಬ್ಬ ವಿದ್ಯಾಭ್ಯಾಸದ ಕಡೆಗೆ ನಡೆಯುತ್ತಿದ್ದಾನೆ ಎಲ್ಲರೂ ನಡೆಯುತ್ತಿದ್ದಾರೆ ಅವರಂದುಕೊಂಡ ಕಡೆಗಲ್ಲದಿದ್ದರೂ ಸಾಗುವ ಕಡೆಗೆ ಹೆಜ್ಜೆ ಇಟ್ಟಿದ್ದಾರೆ. ಇವನ ಯೋಚನೆ, ಎಲ್ಲರದ್ದು ಹುಟ್ಟು ಒಂದೇ ಆಗಿತ್ತು, ಆದ್ರೆ ನಮ್ಮೆಲ್ಲರನ್ನ ಬದಲಿಸಿದ್ದು ನಮ್ಮ ಸುತ್ತಮುತ್ತಲಿನ ವಾತಾವರಣ ಎಲ್ಲರೂ ಅದ್ಭುತವಾಗಿ ಬೆಳೆದು ನಿಲ್ಲುವ ಆಲೋಚನೆಯನ್ನ ಭಗವಂತನೇ ಯಾಕೆ ಮಾಡ್ಲಿಲ್ಲ ಅಥವಾ ಭಗವಂತ ಕೊಟ್ಟ ಯೋಚನೆಗೆ ನಾವು ಸರಿಯಾದ ನೀರು ಗೊಬ್ಬರ ಹಾಕಿ ಬೆಳೆಸಿಲ್ವೋ ಈ ಸಂಶಯ ಮತ್ತೆ ಮತ್ತೆ ಕಾಡುತ್ತಿದೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೨೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬