ಒಂದು ಒಳ್ಳೆಯ ನುಡಿ - 294
ಬರಹಗಾರರ ಬಳಗ
ಡಿಸೆಂಬರ್ ೧೧, ೨೦೨೫
೬ ವೀಕ್ಷಣೆಗಳು
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್/
ಸರ್ವರೋಗಹರಂ ದೇವಂ ದತ್ತಾತ್ರೇಯ ಮಹಂಭಜೇ
ಒಂದೇ ದೇಹ, ಮೂರುತಲೆ, ಆರು ಕೈಗಳ ತ್ರಿಮೂರ್ತಿ ರೂಪವಾದ, ದತ್ತಾತ್ರೇಯನ ಜಯಂತಿ ಇತ್ತೀಚೆಗೆ ಕಳೆದಿದೆ. ಭಜನೆ ಈ ದಿನ ಪ್ರಾಶಸ್ತ್ಯ. ಅತ್ರಿ -ಅನಸೂಯರ ಪುತ್ರನೀತ. ಮಹಾಸಾಧಕ. ಶೈವ-ವೈಷ್ಣವ ಎರಡೂ ತತ್ವವಿದೆ. ಸಚ್ಚಾರಿತ್ರ್ಯ, ನಡತೆ, ಪಾತಿವ್ರತ್ಯ, ಜ್ಞಾನ, ವೈರಾಗ್ಯ, ಬ್ರಹ್ಮಚರ್ಯ, ತ್ಯಾಗದಿಂದ ಅಮೃತತ್ವದ ಸಂಕೇತ ಈ ಎಲ್ಲವೂ ದತ್ತಾತ್ರೇಯನಲ್ಲಿ ಅಡಗಿದೆ. ಮಾರ್ಗಶಿರ ಮಾಸದ ಹುಣ್ಣಿಮೆಯಂದು ಜನನ. (ಇಂದಿನ ಹುಣ್ಣಿಮೆಗೆ ಹೊಸ್ತಿಲ ಹುಣ್ಣಿಮೆಯೆಂದೂ ಹೆಸರಿದೆ.) ಬ್ರಹ್ಮ, ವಿಷ್ಣು, ಮಹೇಶ್ವರನ ಸಂಯೋಜಿತ ರೂಪ ಹೊತ್ತ ದತ್ತಾತ್ರೇಯ ಪಾಪನಾಶಕನಂತೆ. ಋಷಿಮುನಿಗಳು, ಸಾಧು ಸಂತರು ಈತನ ಆರಾಧಕರು.
ಶೂಲಹಸ್ತ ಗಧಾಪಾಣೇ ವನಮಾಲಾ ಸುಕಂಧರ/
ಯಜ್ಞಸೂತ್ರಧರ ಬ್ರಹ್ಮನ್ ದತ್ತಾತ್ರೇಯ ನಮೋಸ್ತುತೇ//
ಚಾರಿತ್ರ್ಯ ರಕ್ಷಣೆಯ ಹಿರಿಮೆಯನ್ನು,ಪಾತಿವ್ರತ್ಯದ ಶ್ರೇಷ್ಠತೆಯನ್ನು ಸಾರುವ ಹಿನ್ನೆಲೆಯಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ದತ್ತಾತ್ರೇಯನ ಕ್ಷೇತ್ರಗಳಲ್ಲಿ ಈ ದಿನ ಭಗವದ್ಗೀತೆ, ವೇದ ಪಾರಾಯಣ, ಸಾಮೂಹಿಕ ಭಜನೆ ಹಮ್ಮಿಕೊಳ್ಳುತ್ತಾರೆ. ದತ್ತಾತ್ರೇಯನ ಮೂಲಮಂತ್ರ' ಓಂ ದ್ರಂ ಶ್ರೀ ಗುರುದೇವದತ್ತ' ಜಪ ಮಾಡುತ್ತಾರೆ. 'ಓಂ ದತ್ತಾತ್ರೇಯಾಯ ವಿದ್ಮಹೇ ಯೋಗೀಶ್ವರಾಯ ಧೀಮಹಿ, ತನ್ನೋ ದತ್ತ ಪ್ರಚೋದಯಾತ್ ಯೋಗಶಕ್ತಿ:'
ಪೂಜೆ, ಉಪವಾಸ, ಪ್ರಾರ್ಥನೆ, ನಿವೇದನೆ ಭಕ್ತರಿಂದ, ಅನುಯಾಯಿಗಳಿಂದ ಈ ದಿನ ನಡೆಯುತ್ತದೆ. ಗಾಣಾಗಾಪುರದಲ್ಲಿ ಬಹಳ ವೈಭವದಿಂದ ಆಚರಿಸುತ್ತಾರೆ. ಇಷ್ಟಾರ್ಥ ಈಡೇರಿಕೆಗಾಗಿ ಗಂಗಾಸ್ನಾನ ಮಾಡುವವರೂ ಇದ್ದಾರೆ. ಅಜ್ಞಾನ, ಅಹಂಕಾರ, ಮಾನಸಿಕ ಆರೋಗ್ಯ ದೂರವಾಗುವುದೆಂಬ ನಂಬಿಕೆ. ನಿರ್ಮಲ ಮನಸ್ಸಿನ ಧ್ಯಾನದಿಂದ ಆಧ್ಯಾತ್ಮಿಕ ಶಕ್ತಿ ಬಲಗೊಳ್ಳುವುದಂತೆ. ಆಂತರಿಕ ಆಲೋಚನಾ ಲಹರಿಗಳಿಗೆ ಕಡಿವಾಣಕ್ಕೆ ಏಕಾಗ್ರತೆ ಬಲಗೊಳ್ಳುವುದಕ್ಕೆ ಇದು ಸಹಕಾರಿ. ದತ್ತಾತ್ರೇಯನನ್ನು ಧ್ಯಾನಿಸಿ ಕೃತಾರ್ಥರಾಗೋಣ
ಓಂ ಬ್ರಹ್ಮರೂಪಾಯ ನಮ:
ಓಂ ವಿಷ್ಣುರೂಪಾಯ ನಮ:
ಓಂ ಶಂಕರರೂಪಾಯ ನಮ:
ಓಂ ಯೋಗೀಶ್ವರಾಯ ನಮ:
ಓಂ ಧರ್ಮಪತಯೇ ನಮ:
ಓಂ ಅವಧೂತಾಯ ನಮ:
ಓಂ ಅತ್ರೇಯಾಯ ನಮ:
ಓಂ ಗುರುದೇವಾಯ ನಮ:
(ಸಂಗ್ರಹ:ನಾರದ ಪುರಾಣ)
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಡಿಸೆಂಬರ್ ೧೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬