ವಿದ್ಯೆಯೆಂದರೆ ಮೆದುಳಿನೊಳಗೆ ಬಲವಂತವಾಗಿ ತುಂಬಿಸುವ ಒಂದು ಸಾಧನವಲ್ಲ. ಮನಸ್ಸಿಗೆ ಬಂದಂತೆ ವ್ಯವಹರಿಸುವ ವಿಷಯ ವಾಸನೆಯಲ್ಲ. ಅದೊಂದು ಜೀವ ಮತ್ತು ಜೀವನ ಪೋಷಕ. ಶೀಲ ಸ್ವಭಾವ, ಹವ್ಯಾಸಗಳನ್ನು ಶರೀರಕ್ಕೆ ತುಂಬುವ ಕ್ರಿಯೆ. ಕಂಠಪಾಠ ಸಲ್ಲದು. ಮೆದುಳಿನ ಬೆಳವಣಿಗೆಗಾಗಿ, ಸ್ವಂತಿಕೆಗಾಗಿ, ಅಭಿವ್ಯಕ್ತಿ ವೃದ್ಧಿಗಾಗಿ ಸ್ವ ಹಿತಾಸಕ್ತಿ, ತನ್ನದೇ ಅಂತರಂಗದ ಭಾವನೆಗಳನ್ನು ಪ್ರಕಟಪಡಿ‌ಸುವ ಸಾಮರ್ಥ್ಯ ಗಳಿಸುವಂತಾಗಬೇಕು. ಆಲೋಚನೆಗಳ ಶರಧಿ ಹಿತಮಿತವಾಗಿರಬೇಕು. 'ಜನರ ಧರ್ಮ ಕರ್ಮ'ಗಳಿಗೆ ಚ್ಯುತಿ ಬರಬಾರದಂತಿರಬೇಕು. ಇತರರ ಭಾವನೆಗಳಿಗೆ ಧಕ್ಕೆಯುಂಟು ಮಾಡಬಾರದು.ನೋವು,ಹಿಂಸೆ ಕೊಡಬಾರದು. ವ್ಯಂಗ್ಯವಿರಬಾರದು. ನಡೆನುಡಿ ಚೆನ್ನಾಗಿರಲಿ. ನಮ್ಮ ಭಾವನೆ ಹೇಗಿದೆಯೋ ಹಾಗೆ ನಾವು ರೂಪುಗೊಳ್ಳುತ್ತೇವಂತೆ.ಜ್ಞಾನ ಸಂ ಪಾದನೆಯ ಮಾರ್ಗ ಚೆನ್ನಾಗಿರಲಿ.ಏಕಾಗ್ರತೆ,ಶ್ರದ್ಧೆಯಿರಲಿ.ಸಾಧನೆಗೆ ಮನಸ್ಸೂ ಬೇಕು.'ಆಳಾಗಲು ಕಲಿಯದೆ ಅರಸ'ನಾಗಲು ಸಾಧ್ಯವಿಲ್ಲ. ಮಕ್ಕಳು ಕಂಬದಾಟ ಆಡುವರು.ಆಗ ಕಂಬವನ್ನು ಸುತ್ತುವುದು ನೋಡುತ್ತೇವೆ.ಕಂಬವನ್ನು ಬಿಟ್ಟರೆ ಕೆಳಗೆ ಬಿದ್ದು ಗಾಯವಾಗುತ್ತದೆಂದು ಮನಸ್ಸು ಎಚ್ಚರಿಸುತ್ತಿರುತ್ತದೆ.ನಮ್ಮ ಜೀವನವೊಂದು ಕಂಬವಿದ್ದಂತೆ.ಅದರಲ್ಲಿ ಭಗವಂತನಿದ್ದಾನೆ.ನಂಬಿದವಗೆ ಇಂಬು ನೀಡುವವನಾತ.ಆತ್ ಮಜ್ಞಾನ,ಆತ್ಮ ವಿಶ್ವಾಸ ಬೆಳೆಸುವ ವಿದ್ಯೆ ಕಲಿಯೋಣ.'ಬಿತ್ತಿದಂತೆ ಬೆಳೆ' ಅರಿತು ಬಾಳೋಣ.  (ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ