ಎಲ್ಲಿ ಸತ್ಯ ಸಂಧತೆ, ಪ್ರಾಮಾಣಿಕತೆ ಇದೆಯೋ ಅಲ್ಲೊಂದು ಭಗವದ್ ಶಕ್ತಿ ಇದೆಯಂತೆ' ನನ್ನ ತಂದೆಯವರು ಹೆಚ್ಚಾಗಿ ಪುರಾಣ ಪ್ರವಚನ ಮಾಡುವಾಗ ಹೇಳುತ್ತಿದ್ದ ನುಡಿ. ಉಪನಿಷತ್ತಿನಲ್ಲೂ ಉಲ್ಲೇಖವಿದೆಯಂತೆ. ಯಾರು ಕಷ್ಟ ಪಟ್ಟುಕೆಲಸ ಮಾಡುವರೋ, ತ್ಯಾಗ ಅರ್ಪಣಾಭಾವ ಇರುವುದೋ ಅವರ ಬೆನ್ನ ಹಿಂದೆ ಭಗವಂತ ಇದ್ದಾನಂತೆ. ಸತ್ಯದ ದಾರಿಯಲ್ಲಿ ಹೋಗುತ್ತೇನೆ ಎಂದವಗೆ  ಭೋಗದ ಆಸೆ ಬೇಡ.ತ್ಯಾಗವೇ ಮೊದಲ ಪಂಕ್ತಿ .ವಿಧಿವಿಧಾನಗಳು,ನೀತಿ ನಿಯಮಗಳು, ಹೀಗೆಯೇ ಸಾಗಬೇಕೆಂಬ ಹೇಳಿಕೆಗಳು ಮನೆಯ, ಸಮಾಜದ, ಮನುಷ್ಯರ ಕ್ಷೇಮಕ್ಕಾಗಿ ಬಂದವುಗಳಾಗಿವೆ. ಕೆಲವರು ಇದನ್ನು ಮೀರಿ ಅಡ್ಡದಾರಿ ಹಿಡಿದು ತಿಳಿದೂ ತಿಳಿದೂ ಜೇಡರಬಲೆಯಲ್ಲಿ ಸಿಲುಕಿ ಒದ್ದಾಡುವಂತೆ. ಒದ್ದಾಟದಲ್ಲಿಯೇ ಇರುತ್ತಾರೆ .ಹೊರಬರಲಾಗದೆ ಚಡಪಡಿಸುವರು. ಅವರಿಗಾಗಿ ಇತರರೂ ಕಷ್ಟ ಪಡುವರು.ಈ ಒದ್ದಾಟ-ಗುದ್ದಾಟ-ಚಡಪಡಿಕೆ ಎಲ್ಲವನ್ನೂ ನಮಗೆ ನಾವೇ ತಲೆ ಮೇಲೆ ಹಾಕಿಕೊಳ್ಳ ದೆ,ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದ್ದರೆ ಎಲ್ಲರಿಗೂ ಕ್ಷೇಮ.'ಏನಾದರೂ ಸಮಾಜಕ್ಕೆ ಉಪಕಾರ ಮಾಡಿ,ಬೇಡದ ಹವ್ಯಾಸ ಬಿಟ್ಟ ಬಿಡಿ,ಕೊಟ್ಟು ಕೆಡದಿರಿ,ಕಂಟಕಪ್ರಾಯರಾಗದಿರಿ ಎಂದು, ಹೇಳಬಹುದಷ್ಟೆ.ಒಳ್ಳೆಯ ಮನಸ್ಸಿನಿಂದ ಸ್ವೀಕರಿಸಿ*  *ಬಾಳಿದರೆ  ಚಂದ.'ಇಂದ್ರಿಯಗಳ ವಾಸನೆ ಬಿಟ್ಟವರು ಮರ್ಯಾದೆಯಲ್ಲಿ ಬಾಳಬಹುದು.ವಿಷಯವಾಸನೆ ವಿದ್ಯಾರ್ಜನೆಗೆ,ಒಳ್ಳೆಯದಕ್ಕೆ,ಜೀವನ  ನಿರ್ವಹಣೆಗೆ, ದುಡಿಮೆಗೆ ಮಾತ್ರ ಇರಲಿ. ಬಯಕೆಗಳು ಗರಿಕೆದರಿದರೆ ಕಷ್ಟ.ಸ್ವತ:ಅಂಕುಶವಿರಲಿ.ಸಮಾಜದ ಕಟ್ಟುಪಾಡುಗಳಿಗೆ ವಿರುದ್ಧವಾಗಿ ಹೋದವರಿಗೆ ಇಂದಲ್ಲ ನಾಳೆಯಾದರೂ ಶಿಕ್ಷೆ ಕಾದಿದೆ.ಅದೊಂದು 'ತೂಗುಕತ್ತಿ'ಯಿದ್ದಂತೆ .ತಲೆಯ ಮೇಲೆ ಬೀಳದಂತೆ ಜಾಗ್ರತೆ ವಹಿಸೋಣ. ನೆಮ್ಮದಿ,ಆರೋಗ್ಯ ನಮ್ಮದಾಗಿಸಿಕೊಳ್ಳೋಣ. (ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ