ಮಾತನಾಡು ಮಲ್ಲಿಗೆ ನನ್ನ ಪ್ರೀತಿ ಮಲ್ಲಿಗೆ ಸಾಕೆ ನನ್ನ ಅಪ್ಪುಗೆ ಹೇಳು ನೀನು ಮೆಲ್ಲಗೆ ಯಾವ ಕೊರತೆ ಕಂಡೆ ನೀನು ನನ್ನ ಪ್ರೀತಿ ಮಲ್ಲಿಗೆ   ನಿನ್ನ ನನ್ನ ಹ್ರುದಯದಲ್ಲಿ ಮುಚ್ಚಿ ಮೆಚ್ಚಿ ಸಾಕಿ ಸಲಹಿ ಬೇಡವಾದನೇಕೆ ಈಗ ಬಿಡಿಸಿ ಹೇಳು ಮಲ್ಲಿಗೆ ಕಾಡಬೇಡ ಕೊಲ್ಲ ಬೇಡ ನನ್ನ ಪ್ರೀತಿ ಮಲ್ಲಿಗೆ   ಅಪ್ಪ ಒಪ್ಪಲಿಲ್ಲ ನಿನ್ನ ಅವ್ವ ಬಯಸಲಿಲ್ಲ ನಿನ್ನ ತಂಗಿ ಕೊಡ ಬೇಡ ಎಂದಳಂತೆ ನಿನ್ನ ಅದರೊನೊ ಬಯಸಿ ತಂದೆ ಒಂದು ಬಾರಿ ಹೇಳಿ ಹೋಗು ಮಲ್ಲಗೆ ನನ್ನ ಪ್ರೀತಿ ಮಲ್ಲಿಗೆ   ವಿಧ್ಯೆಯನ್ನ ಅರ್ಧದಲ್ಲೆ ಬಿಟ್ಟು ಬಂದೆ ಮಲ್ಲಿಗೆ ನಿನ್ನ ಪ್ರೀತಿ ಹಾಡಿನಲ್ಲಿ ಕರಗಿ ಹೋದೆ ಮಲ್ಲಿಗೆ ಮಾತನಾಡು ಮಲ್ಲಿಗೆ ನನ್ನ ಪ್ರೀತಿ ಮಲ್ಲಿಗೆ   ನೀನು ಬಯಸಿದ್ದೆಲ್ಲವನ್ನ ಕೊಲಿನಾಲಿ ಮಾಡಿ ನಾನು ತಂದು ಕೊಟ್ಟ ನೆನಪು ನಿನಗೆ ಕಾಡೋದಿಲ್ಲವಾ ಮಲ್ಲಿಗೆ ನನ್ನ ಪ್ರೀತಿ ಮಲ್ಲಿಗೆ   ರಾತ್ರಿ ನಿದ್ದೆ ಹಗಲು ಮುದ್ದೆ ಎಲ್ಲವನ್ನೊ ಬಿಟ್ಟು ನಾನು ಹುಚ್ಚನಾದೆ ಮಲ್ಲಿಗೆ ಹೊಗುದಾದ್ರು ಎಲ್ಲೆಗೆ ಹೇಳಿ ಹೋಗು ಮಲ್ಲಿಗೆ ನನ್ನ ಪ್ರೀತಿ ಮಲ್ಲಿಗೆ   ಸಲಿಗೆಯಿಂದ ಮುದ್ದುಮಾಡಿ ಪ್ರೀತಿಯಿಂದ ಕರೆವ ನಿನ್ನ ಮಾತು ನನಗೆ ಹಾಲು ಜೇನು ಒಂದು ಬಾರಿ ತಬ್ಬು ನನ್ನ ಬಿಟ್ಟು ಹೋಗುವುದಕು ಮುನ್ನ ಮಾತನಾಡು ಮಲ್ಲಿಗೆ ನನ್ನ ಪ್ರೀತಿ ಮಲ್ಲಿಗೆ   ನಿಜಕೊ ನನ್ನ ತಪ್ಪೇನಿಲ್ಲ ಬೊರು ಲಾರಿ ಬ್ರೇಕು ಇರದೆ ಬಂದು ಗುದ್ದಿ ನನ್ನ ನಲ್ಲೆಯನ್ನ ಅಲ್ಲೆ ಹೊತ್ತುಹೊಯ್ತು ಮೆಲ್ಲಗೆ  ಎಲ್ಲಿ ಹೋದೆ ನನ್ನ ಬಿಟ್ಟು ನನ್ನ ಪ್ರೀತಿ ಮಲ್ಲಿಗೆ ಮಾತನಾಡು ಮಲ್ಲಿಗೆ