ಸ್ಟೇಟಸ್ ಕತೆಗಳು (ಭಾಗ ೧೨೫೩) - ಹಣ್ಣಿನ ಮರ
ಬರಹಗಾರರ ಬಳಗ
ಮಾರ್ಚ್ ೦೭, ೨೦೨೫
೧೦ ವೀಕ್ಷಣೆಗಳು
ಮೊಳಕೆಯೊಡೆದು ಮರವಾಗಬೇಕು ಅನ್ನುವ ಕಾರಣಕ್ಕೆ ಬೇರೆ ಬೇರೆ ತರದ ಬೀಜಗಳನ್ನು ನೆಲಕ್ಕೆ ಹಾಕಿದ್ರು. ಎಲ್ಲದಕ್ಕೂ ಸರಿಯಾದ ಪ್ರಮಾಣದ ನೀರು, ಗೊಬ್ಬರ ಎಲ್ಲವನ್ನು ನೀಡಿದರು. ಆದರೆ ಕೆಲವೊಂದು ಗಿಡಗಳ ಎಲೆಗಳು ಸ್ವಲ್ಪ ಅಗಲವಾಗಿಯೂ ಇನ್ನೂ ಕೆಲವು ಎಲೆಗಳು ಸ್ವಲ್ಪ ಸಪೂರವಾಗಿಯೂ ಬೆಳೆಯೋದಕ್ಕೆ ಪ್ರಾರಂಭವಾಯಿತು. ಒಂದಷ್ಟು ಗಿಡಗಳನ್ನು ಒಬ್ಬೊಬ್ಬರಿಗೆ ಜವಾಬ್ದಾರಿ ವಹಿಸುವುದು ಅಂತ ಮನೆ ಯಜಮಾನ ತೀರ್ಮಾನ ಮಾಡಿಬಿಟ್ಟ. ಕೆಲವರು ಓಡೋಡಿ ಬಂದು ಅಲ್ಲಿ ಆಳವಾಗಿ ಬೇರೂರಿ ಅಗಲವಾಗಿ ಎಲೆಯನ್ನ ಹಬ್ಬಿಕೊಂಡಿರುವ ಗಿಡದ ಜವಾಬ್ದಾರಿಯನ್ನು ವಹಿಸಿಕೊಂಡೇ ಬಿಟ್ರು. ಉಳಿದವರೆಲ್ಲರಿಗೂ ಸಿಕ್ಕ ಗಿಡಗಳು ಅಷ್ಟೇನು ಬೇರು ಬಿಟ್ಟದ್ದಲ್ಲ .ಅವರಿಗೆ ಸಿಕ್ಕಿದ ಅಷ್ಟು ಗಿಡಗಳಲ್ಲಿ ಕೆಲವೊಂದು ಆಳಕ್ಕೆ ಬೇರು ಇಳಿಸಿದ್ದು ಬಿಟ್ಟರೆ ಉಳಿದದ್ದೆಲ್ಲಾ ಮಾಮೂಲಿ ಗಿಡಗಳು. ಸಾಧ್ಯವಾಗುವಷ್ಟು ಬೇರನ್ನು ಬಿಟ್ಟು ನೆಲದ ಮೇಲೆರಲು ಆರಂಭವಾಯಿತು. ನೀರು ಗೊಬ್ಬರ ಎಲ್ಲವನ್ನು ಕಾಲದಿಂದ ಕಾಲಕ್ಕೆ ನೀಡುತ್ತಾ ಈ ಗಿಡ ಹಣ್ಣು ಕೊಡುವ ಸಮಯವಾಯಿತು. ಅದೊಂದು ದಿನ ಕೆಲವು ಗಿಡಗಳು ಹಣ್ಣು ನೀಡಲು ಕೆಲವು ಗಿಡಗಳು ಹೂವು ಅಷ್ಟೇ ನೀಡುವುದಕ್ಕೆ ಸಾಧ್ಯವಾಗಿ ಹಣ್ಣನ್ನ ನೀಡೋಕ್ಕಾಗದೆ ಮೌನವಾದವು. ಹಣ್ಣು ಸಿಕ್ಕ ಗಿಡದ ಜವಾಬ್ದಾರಿ ವಹಿಸಿಕೊಂಡವರಿಗೆ ಅದ್ಭುತ ಸಂತೋಷ ತಮ್ಮಿಂದಲೇ ಸಾದ್ಯವಾದದ್ದು ಅನ್ನುವ ಭಾವನೆ. ಆದರೆ ಬೇರು ಆಳಕ್ಕಿಳಿಸಿ ತನ್ನ ಎಲೆಗಳನ್ನು ವಿಶಾಲವಾಗಿ ಹರಡಿ ನಿಂತು ಬೇಕಾದೆಲ್ಲವನ್ನು ಪಡೆದುಕೊಂಡು ಹಣ್ಣಿನ ಗಿಡದ ಪರಿಶ್ರಮದ ಅರಿವು ಅವರಿಗಾಗಲೇ ಇಲ್ಲ. ಉಳಿದ ಗಿಡಗಳು ತಮ್ಮನ್ನು ವಿಶೇಷವಾಗಿ ಗಮನಿಸುವವವರ ಜವಾಬ್ದಾರಿಯನ್ನು ವಹಿಸಿಕೊಳ್ಳುವವರ ನಿರೀಕ್ಷೆಯಲ್ಲಿದ್ದವು. ಅವುಗಳಿಗೆ ಆ ಅವಕಾಶವೇ ಸಿಗಲಿಲ್ಲ. ಯಜಮಾನನಿಗೆ ಒಂದಷ್ಟು ಗಿಡಗಳಿಂದ ಹಣ್ಣು ಸಿಕ್ಕಿತು ಇನ್ನೊಂದಷ್ಟು ಗಿಡಗಳು ಮುಂದಿನ ವಸಂತ ಕಾಲದಲ್ಲಿ ಚಿಗುರಿ ಹಣ್ಣು ಬಿಡುವ ಸೂಚನೆಯನ್ನು ನೀಡುತ್ತಿದ್ದವು. ಹಣ್ಣು ಬಿಡುವಾಗ ಆ ಗಿಡಕ್ಕೂ ಹಾಗೆ ಯಜಮಾನನಿಗೂ ಸಂತೋಷವಾಗುವುದು ಸಹಜ. ಹಣ್ಣು ಬಿಡದ ಗಿಡದ ಕಾಯುವಿಕೆ ಮಾತ್ರ ಖಂಡಿತಾ ಫಲ ದೊರಕುತ್ತದೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೦೭, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬