ಸ್ಟೇಟಸ್ ಕತೆಗಳು (ಭಾಗ ೧೩೩೬) - ಬೇಟೆಗಾರ
ಬರಹಗಾರರ ಬಳಗ
ಮೇ ೨೯, ೨೦೨೫
೫ ವೀಕ್ಷಣೆಗಳು
ಎಲ್ಲರೂ ಈ ಕತೆಯನ್ನ ಓದುವವರೇ, ತುಂಬಾ ಆಸಕ್ತಿಯಿಂದ, ಉತ್ಸುಕತೆಯಿಂದ ಪುಸ್ತಕ ಸಾವಿರಗಟ್ಟಲೆ ಮಾರಾಟವಾಯಿತು. ಬೇಟೆಗಾರನೊಬ್ಬನ ಸತ್ಯಕತೆ ಆಧಾರಿತ ಪುಸ್ತಕ ಅದಾಗಿತ್ತು. ಪ್ರತೀ ಪುಟದಲ್ಲೂ ಬೇಟೆಗಾರನ ಹೋರಾಟ ಚಾಕಚಕ್ಯತೆ ಎಲ್ಲವನ್ನೂ ವರ್ಣಿಸಲಾಗಿತ್ತು. ಅದನ್ನು ಓದಿದ ಪ್ರತಿಯೊಬ್ಬರು ಬೇಟೆಗಾರನನ್ನು ಅಭಿನಂದಿಸಿದವರೇ. ಹೀಗೆ ಸಮಯಗಳು ಉರುಳಿದವು. ಪ್ರತೀ ಸಲವೂ ಬೇಟೆಗಾರನ ಕತೆ ದೊಡ್ಡದಾಗಿತ್ತು. ಕೆಲವು ಕಾಲಗಳ ನಂತರ ಸಿಂಹ, ಹುಲಿಗಳಿಗೆ ಮಾತು ಬಂದವು. ಅವು ಜನರನ್ನು ಭೇಟಿಯಾದವು. ಕಾಡೊಳಗೆ ನಡೆದ ಸತ್ಯ ಘಟನೆಯನ್ನು ಜನರ ಮುಂದಿಟ್ಟವು. ಆಗ ಬೇಟೆಗಾರನ ಬಳಿ ಮಾತುಗಳೇ ಇರಲಿಲ್ಲ. ಸಿಂಹ, ಹುಲಿಗಳು ಮಾತನಾಡುವಾಗ ಬೇಟೆಗಾರ ಊರು ಬಿಟ್ಟಿದ್ದ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮೇ ೨೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬