ಸ್ಟೇಟಸ್ ಕತೆಗಳು (ಭಾಗ ೧೩೪೦) - ಕಾಮನಬಿಲ್ಲು
ಬರಹಗಾರರ ಬಳಗ
ಜೂನ್ ೦೨, ೨೦೨೫
೭ ವೀಕ್ಷಣೆಗಳು
ಮಗು ನೀನು ಈಗ ಬೆಟ್ಟದ ಮೇಲೆ ಇದ್ದೀಯ ತುಂಬಾ ಎತ್ತರವಾದ ಬೆಟ್ಟಗಳು. ಪ್ರತಿದಿನ ಊರಲ್ಲಿ ನಿಂತು ಬೆಟ್ಟದ ಮೇಲೆ ಆಗಾಗ ಮೂಡುವ ಕಾಮನಬಿಲನ್ನ ನೋಡಿ ಸಂತೋಷ ಪಡುತ್ತಿದ್ದವ. ಆದರೆ ಕೆಲವು ದಿನಗಳಿಂದ ನಿನ್ನ ಮನಸೊಳಗೆ ಆ ಕಾಮನಬಿಲ್ಲನ್ನು ಹಿಡಿಯುವ ಬಯಕೆಯಾಗಿದೆ. ಹಾಗಾಗಿ ಬೆಟ್ಟವೇರಿದ್ದೀಯ. ತಪ್ಪಲ್ಲ. ಏರಿದ ಬೆಟ್ಟದ ಮೇಲೆ ನಿಂತು ಆನಂದಿಸಿ ಮನೆಗೆ ಮರಳಬೇಕು ನೀನು ಅದನ್ನ ಹೊರತುಪಡಿಸಿ ಕಾಮನಬಿಲ್ಲನ್ನ ಹಿಡಿಯಲೇ ಬೇಕೆಂದು ಬೆಟ್ಟದಿಂದ ಜಿಗಿದರೆ ಒಂದು ಕ್ಷಣ ನಿನಗೆ ಸಂಭ್ರಮ ಸಿಗಬಹುದು, ಆದರೆ ಕೆಲವು ಕ್ಷಣದಲ್ಲಿ ನಿನ್ನ ದೇಹ ಬಂದು ನೆಲಕಪ್ಪಳಿಸುತ್ತಾ ದೇಹದಲ್ಲಿರುವ ಉಸಿರು ಹಾರಿ ಹೋಗುತ್ತದೆ. ರಕ್ತ ನೆಲಕ್ಕೆ ತೊಟ್ಟಿಕ್ತಾ ಖಾಲಿಯಾಗಿ ಬಿಡುತ್ತೆ ಆಗ ನಿನಗೆ ನೀನು ಮಾಡಿದ ತಪ್ಪಿನ ಅರಿವಾಗುತ್ತದೆ. ಅದಕ್ಕೆ ಹೇಳ್ತಾ ಇದ್ದೇನೆ ಮಗ ಮಾಡಿದ ತಪ್ಪಿನಿಂದ ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ಬರುವ ಮೊದಲೇ ಎಚ್ಚರವಾಗು. ಕಾಮನಬಿಲ್ಲು ಕಣ್ಣಿಗೆ ಕಾಣುವುದಕ್ಕೆ ಚಂದ ಹಿಡಿಯುವುದಕ್ಕಲ್ಲ ವಿಲಾಸಿ ಜೀವನಕ್ಕೊಸ್ಕರ ದಾರಿ ತಪ್ಪುತ್ತಿದ್ದ ಮಗನನ್ನ ಬೈದು ಬುದ್ದಿವಾದ ಹೇಳುತ್ತಿದ್ದರು ನಾಗರಾಜರು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜೂನ್ ೦೨, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬