ಸ್ಟೇಟಸ್ ಕತೆಗಳು (ಭಾಗ ೧೩೪೫) - ಎತ್ತರ
ಬರಹಗಾರರ ಬಳಗ
ಜೂನ್ ೦೬, ೨೦೨೫
೯ ವೀಕ್ಷಣೆಗಳು
ರಮೇಶ ತುಂಬಾ ಎತ್ತರಕ್ಕೆ ಹತ್ತಿ ಬಿಟ್ಟಿದ್ದಾನೆ ಎಷ್ಟು ಇಣುಕಿದ್ರೂ ಆತನಿಗೆ ನಿರೀಕ್ಷಿಸಿದ ಸಂತೋಷ ಸಿಕ್ತಾ ಇಲ್ಲ. ತಾನು ಇಷ್ಟು ಎತ್ತರ ಏರಿದರೂ ಅದ್ಭುತವಾದ ದೃಶ್ಯ ಕಣ್ಣ ಮುಂದೆ ಕಾಣ್ತಾ ಇಲ್ಲ ಅನ್ನುವ ಬೇಸರ ಮತ್ತೆ ಮತ್ತೆ ಕಾಡ್ತಾ ಇದೆ. ಹಾಗಾಗಿ ಅದೇ ನೋವಿನಿಂದ ಆ ಎತ್ತರವನ್ನು ಇಳಿದುಬಂದು ತನ್ನ ಗೆಳೆಯನ ಜೊತೆ ಮಾತನಾಡಿದ. ಹಾಗೆ ಮಾತನಾಡುತ್ತಿದ್ದವನಿಗೆ ಸತ್ಯ ಅರಿವಾಗುತ್ತಾ ಹೋಯ್ತು. ಆತ ಹತ್ತಿದ ಎತ್ತರ ಏನೂ ಅಲ್ಲ. ಇನ್ನು ಸಾಗುವ ದೂರ ತುಂಬಾ ಇತ್ತು. ಇನ್ನೂ ಸ್ವಲ್ಪ ಶ್ರಮ ಹಾಕಿ ಪ್ರಯತ್ನಪಟ್ಟಿದ್ರೆ ಇನ್ನೂ ಎತ್ತರವನ್ನ ಏರಬಹುದಿತ್ತು. ಅದ್ಭುತವಾದ ದೃಶ್ಯವನ್ನು ಕಣ್ಣ ಮುಂದೆ ಕಾಣಬಹುದಾಗಿತ್ತು. ಎಲ್ಲರೂ ಹೇಳುವುದನ್ನು ಕೇಳಿದ್ದನೇ ವಿನಃ ಅದನ್ನ ಪ್ರಯತ್ನಪಟ್ಟಿರಲಿಲ್ಲ. ಹಾಗಾಗಿ ಆತನಿಗೆ ಒಮ್ಮೆ ಬೇಸರವಾಯಿತು ತಾನು ಏರಬೇಕಾದ ಎತ್ತರವನ್ನೆರದೆ ಮಧ್ಯದಲ್ಲಿ ಎಲ್ಲೋ ನಿಂತು ಕಾಣಬೇಕಾದ ರಮ್ಯ ದೃಶ್ಯ ಕಾಣುತ್ತಿಲ್ಲ ಅನ್ನೋ ನೋವನ್ನು ಪಟ್ಟೆನಲ್ಲಾ ಎಂದು. ಬದುಕಿನಲ್ಲೂ ಹಾಗೆ ತಲುಪಬೇಕಾದ ಸ್ಥಳವನ್ನು ತಲುಪದೇ ಹೋದರೆ ಸಿಗಬೇಕಾದ ಸಿಗುವುದೇ ಇಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜೂನ್ ೦೬, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬