ಸ್ಟೇಟಸ್ ಕತೆಗಳು (ಭಾಗ ೧೩೬೩) - ಭಾಷೆ
ಬರಹಗಾರರ ಬಳಗ
ಜೂನ್ ೨೫, ೨೦೨೫
೧೧ ವೀಕ್ಷಣೆಗಳು
ಭಾಷೆ ಕಲಿಯಬೇಕಿತ್ತು. ಮತ್ತೆ ಮತ್ತೆ ಅನಿಸುತ್ತಿದೆ. ಇಷ್ಟು ದಿನ ಕಾಡದ ವಿಷಯ ಮನಸಿನೊಳಗೆ ಮತ್ತೆ ಮತ್ತೆ ಕೊರೆಯುತ್ತಿದೆ. ನಾನು ಬೆಕ್ಕಿನ ಭಾಷೆ ಕಲಿಯಬೇಕಿತ್ತು. ಮನೆಯೊಳಗೆ ಒಬ್ಬನಾಗಿ ಬದುಕುತ್ತಿರುವ ನಮ್ಮ ಮನೆಯ ಬೆಕ್ಕು ಕೆಲವು ದಿನದಿಂದ ಒಂಥರಾ ಇದ್ದಾನೆ. ಅವನೊಳಗೆ ಆಗುತ್ತಿರುವ ಬದಲಾವಣೆಗೆ ಕಾರಣ ಏನು? ಜ್ವರವೋ ಅಥವಾ ಗಾಡಿಗಳು ಏನಾದರೂ ಗುದ್ದಿ ಹೋಗಿದೆಯೋ, ಬಿದ್ದಿದ್ದಾನೋ, ಹೊಸ ಖಾಯಿಲೆ ಶುರುವಾಗಿದ್ಯಾ ಏನೂ ಗೊತ್ತಾಗ್ತಾ ಇಲ್ಲ. ಡಾಕ್ಟರ್ ನೋಡಿ ಮದ್ದು ನೀಡಿದರೂ ಅವನು ಬದಲಾಗ್ತ ಇಲ್ಲ. ಅವನಿಗೆ ಮಾತು ಬರಬೇಕಿತ್ತು ಅಥವಾ ನನಗೆ ಅವನ ಭಾಷೆ ತಿಳಿಬೇಕಿತ್ತು ಅವನನ್ನ ಮತ್ತೆ ಮೊದಲಿನಂತೆ ಮಾಡುತ್ತಿದ್ದೆ. ಅವನು ಮೊದಲಿನಂತೆ ಆದರೆ ಮನೆ ಇನ್ನಷ್ಟು ಖುಷಿಯಿಂದಿರುತ್ತದೆ. ಏನು ಮಾಡಲಿ ?
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜೂನ್ ೨೫, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬