ಕನ್ನಡ ಪತ್ರಿಕಾ ಲೋಕ (ಭಾಗ ೨೨೦) - ವನ್ಯಜೀವಿ
ಶ್ರೀರಾಮ ದಿವಾಣ
ಆಗಸ್ಟ್ ೦೬, ೨೦೨೫
೮ ವೀಕ್ಷಣೆಗಳು
ಅಮರಾವತಿಯವರ "ವನ್ಯಜೀವಿ"
ಮಂಡ್ಯ ಶಂಕರ ನಗರದ ಅಮರಾವತಿ ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿರುವ ಪಾಕ್ಷಿಕ ಪತ್ರಿಕೆ "ವನ್ಯಜೀವಿ". ವನ್ಯಜೀವಿ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿದ್ದ ಪತ್ರಿಕೆ ಟ್ಯಾಬ್ಲಾಯ್ಡ್ ಮಾದರಿಯಲ್ಲಿ ಎಂಟು ಪುಟಗಳೊಂದಿಗೆ ಬರುತ್ತಿತ್ತು.
೧೯೯೯ರಲ್ಲಿ ಆರಂಭವಾದ " ವನ್ಯಜೀವಿ" ಕೆಲ ವರ್ಷಗಳ ಕಾಲ ನಡೆದು ನಂತರ ಸ್ಥಗಿತಗೊಂಡಿತು. ಪತ್ರಿಕೆಯಲ್ಲಿ ಅರಣ್ಯ ಇಲಾಖೆ, ಪರಿಸರ, ವನ್ಯಜೀವಿಗಳಿಗೆ ಸಂಬಂಧಿಸಿದ ವರದಿಗಳು, ಮಾಹಿತಿಗಳು, ಲೇಖನಗಳು ಮೊದಲ ಆದ್ಯತೆಯಲ್ಲಿ ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ
ಪ್ರಕಟಿಸಿದ: ಆಗಸ್ಟ್ ೦೬, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬