ಸರಕಾರಕ್ಕೆ ಖಾತ್ರಿಯಾಗಿತ್ತು. ಆ ಪ್ರದೇಶದಲ್ಲಿ ಅದ್ಭುತವಾದ ಅದಿರಿನ ನಿಕ್ಷೇಪವಿದೆ ಅದನ್ನ ಬಳಸಿಕೊಂಡು ಸರಕಾರಕ್ಕೆ ಮತ್ತು ಸ್ವಾರ್ಥಕ್ಕೆ ಬಳಸಿಕೊಳ್ಳುವ ಆಲೋಚನೆಯೂ ಅವರೊಳಗೆ ಇತ್ತು. ಆದರೆ ತೊಂದರೆ ಕೊಡುತ್ತಿದ್ದದ್ದು ಆ ಪ್ರದೇಶದಲ್ಲಿ ಬದುಕುತ್ತಿದ್ದ ಜನರು ಮಾತ್ರ. ಅವರನ್ನು ಅಲ್ಲಿಂದ ಓಡಿಸುವುದಕ್ಕೆ ವಿವಿಧ ರೀತಿಯ ಪ್ರಯತ್ನಗಳಾದವು. ಕೊನೆಗೆ ಬಂದೂಕಿನ ಮೂಲಕ ಉತ್ತರ ಕೊಡುವುದೆಂದು ತೀರ್ಮಾನವಾಯಿತು. ಸರಕಾರದ ನಾಯಕರು ದೊಡ್ಡ ಕಟ್ಟಡದ ಒಳಗೆ ಮುಂದೆ ಅಲ್ಲಿಯ ಅದಿರಿನ ಬಳಕೆ ಹೇಗೆ ಅನ್ನುವುದರ ಕುರಿತು ಸಭೆ ಜೋರಾಗಿತ್ತು. ಮದ್ದು ಗುಂಡುಗಳ ಮುಂದೆ ಕಾಡಿನೊಳಗಿನವರ ಬಿಲ್ಲು ಬಾಣಗಳು ಮಾತನಾಡಲೇ ಇಲ್ಲ. ಉಸಿರು ನಿಲ್ಲಿಸಿದ ಹೆಣಗಳು ಅಲ್ಲಲ್ಲಿ ಬಿದ್ದಿದ್ದವು. ಕೆಲವು ಮಣ್ಣೊಳಗೆ ಹೋದರೆ ಇನ್ನು ಕೆಲವು ಕಣ್ಮರೆಯಾಗಿ ಬಿಟ್ಟವು. ಯಾವ ಪತ್ರಿಕೆಗೂ ಯಾವ ಮಾಧ್ಯಮಕ್ಕೂ ಸುದ್ದಿ ತಲುಪಲೇ ಇಲ್ಲ ಮರುದಿನದಿಂದ ನಿಕ್ಷೇಪದ ಅಗೆಯುವಿಕೆ ಆರಂಭವಾಯಿತು... -ಧೀರಜ್ ಬೆಳ್ಳಾರೆ ಚಿತ್ರ ಕೃಪೆ: ಇಂಟರ್ನೆಟ್ ತಾಣ