ನಂಬಿಕೊಂಡು ಬಂದವರ ಮೇಲೆ ಕೊನೇ ತನಕ ಪ್ರೀತಿಯು ಕಡಿಮೆಯಾಗದಿರಲಿ. ಪಡೆದುಕೊಂಡ ಮೇಲೇ ಅವರ ಜೊತೆ ನಡೆದು ಕೊಳ್ಳುವ ರೀತಿಯು ಚೆನ್ನಾಗಿರಲಿ!  ಕೋಪ ಬಂದಾಗ ಕಣ್ಣಿಂದ ನೀರು ಬರಬೇಕೇ ವಿನಃ ಬಾಯಿಂದ ಮಾತು ಬರಬಾರದು.ಕಣ್ಣೀರಿನಿಂದ ಕೋಪ ಕರಗಿ ಹೋಗುತ್ತದೆ. ಮಾತಿನಿಂದ ನಿನ್ನ ಜೊತೆಗಿದ್ದವರೇ ದೂರ ಹೋಗುತ್ತಾರೆ! ಮನೆಯಲ್ಲಿ ಕಣ್ಣಿಗೆ ಕಾಣುವ ಎಷ್ಟೇ ದೀಪಗಳು ಇದ್ದರೂ ದೇವರ ಮುಂದೆ ಇಡೋ ದೀಪಕ್ಕೆ ಬೆಲೆ ಜಾಸ್ತಿ. ಹಾಗೇ ಇಷ್ಟ ಪಡೋ ಮನಸ್ಸುಗಳು ಎಷ್ಟೋ ಇದ್ದರೂ ನಾವು ಇಷ್ಟ ಪಡೋ ಒಂದು ಮನಸ್ಸಿಗೆ ಬೆಲೆ ಜಾಸ್ತಿ! ನಾವು ಸ್ನೇಹ ಮಾಡ ಬೇಕಾಗಿರುವುದು ವ್ಯಕ್ತಿಯ ಜೊತೆಗಲ್ಲಾ, ವ್ಯಕ್ತಿತ್ವದ ಜೊತೆಗೇ! ಪ್ರೀತಿ ಎಂದರೆ ಕಾಡುವುದಲ್ಲಾ ಪ್ರಾಣ ಇರುವವರೆಗೂ ಕಾಯುವುದು. ಈಗ ನಡೆಯುತ್ತಿರುವುದನ್ನು ಒಪ್ಪಿಕೊಳ್ಳಿ, ಹಿಂದೆ ನಡೆದುದನ್ನು ಬಿಟ್ಟು ಹಾಕಿ, ಮುಂದೆ ನಡೆಯುವುದರ ಮೇಲೇ ನಂಬಿಕೆ ಇಡೀ! ಬದುಕು ಒಂದು ಸಂತೆ, ಆ ಸಂತೆಯೊಳಗೆ ನೂರೆಂಟು ಚಿಂತೆ, ಆದರೂ ಬಾಳಲೇ ಬೇಕು ಎಲ್ಲರಂತೆ! ಬಾಳೊಂದು ನಿಗೂಡ ಪಯಣ, ಆದಿ, ಅಂತ್ಯ ನಮ್ಮ ಇಚ್ಛೆಯಂತ್ತಿಲ್ಲದ ಯಾನ, ನೋವು, ನಲಿವು, ಅನೀರೀಕ್ಷಿತ ಭಗವಂತನ ದಾನ. ಭರವಸೆಯಿಂದ ಬದುಕಬೇಕು ಪ್ರತಿಕ್ಷಣ! ಕಾಲ ಎಲ್ಲರಿಗೂ ನೋವು ಕೊಡುತ್ತೇ.. ಯಾಕೆಂದರೆ ಗಡಿಯಾರದಲ್ಲಿರುವುದು ಮುಳ್ಳುಗಳು, ಹೂವಲ್ಲ! ಚಿಂತೆಗಿಂತ ದೊಡ್ಡ ಕಾಯಿಲೆ ಇಲ್ಲಾ, ಸಂತೋಷಕ್ಕಿಂತ  ದೊಡ್ಡ ಔಷದ ಇಲ್ಲಾ! ಅತ್ಯಂತ ಒಳ್ಳೆಯ ಆಯುಧ ಸಹನೆ, ಬಹು ದೊಡ್ಡ ಪ್ರತೀಕಾರ ಮೌನ. ಕೆಲವೊಬ್ಬರ ನಗುವಿಗಾಗಿ ಕೆಲವೊಮ್ಮೆ ನಮ್ಮ ನೋವು ಗಳನ್ನು ಅಡವಿಡ ಬೇಕಾಗುತ್ತದೆ! ಗಂಡು ಮಕ್ಕಳು ಯಾವಾಗಲೂ ದುಡಿದು ಬಂದ ಮೇಲೇ ಕಷ್ಟ ಅನಿಸೋದಿಲ್ಲ. ಕಷ್ಟ ಯಾವಾಗ ಅನಿಸುತ್ತೇ ಅಂದರೆ ಮನೆಯವರು ಉಲ್ಟಾ ಸೀದಾ ಮಾತಾಡಿದಾಗ ಮಾತ್ರ! ಪ್ರೀತಿಯು ಹೃದಯದಿಂದ ಹುಟ್ಟಿದಾಗ ಮಾತ್ರ ಅದು ಶಾಶ್ವತ. ಅದು ಬಲವಂತದಿಂದ ಹುಟ್ಟಿದರೆ ಅದು ಕ್ಷಣಿಕ! ನಗುತ್ತಿರು ಮನವೇ, ನೋವು ಹೊಸದಲ್ಲ, ಬದುಕು ಶಾಶ್ವತವಲ್ಲ! -ಗೀತಾ ಭಾಸ್ಕರ್, ಬೆಂಗಳೂರು. ಚಿತ್ರ ಕೃಪೆ: ಇಂಟರ್ನೆಟ್ ತಾಣ