ಹಿಂದು ಜಾಗರಣವೊಂದೇ ಉತ್ತರ
ಕೆ.ಪಿ.ಅಶ್ವಿನ್ ರಾವ್
ಆಗಸ್ಟ್ ೧೪, ೨೦೨೫
೧೦ ವೀಕ್ಷಣೆಗಳು
೧೮ ವರ್ಷಗಳ ಹಿಂದೆ ರಾಜೀವ್ ಮಕ್ಟೋತ್ರಾ ಅವರ Snakes in the Ganga: Breaking India 2.0 ಎಂಬ ಪುಸ್ತಕ ಪ್ರಕಟವಾಗಿತ್ತು. 'ಭಾರತೀಯರ ಎದೆ ನಡುಗಿಸುವ ಹಲವು ಸಂಗತಿಗಳನ್ನು ಲೇಖಕರು ಅದರಲ್ಲಿ ಬರೆದಿದ್ದರು. ವಿದೇಶಿ ಶಕ್ತಿಗಳು ಭಾರತವನ್ನು ನೋಡುವ ದೃಷ್ಟಿ, ಪೂರ್ವಗ್ರಹ, ಹುನ್ನಾರ, ಅದು ಕಾರ್ಯಗತಗೊಂಡಿರುವುದೆಷ್ಟು? ಅದಕ್ಕೆ ಬಲಿಯಾದ ಭಾರತೀಯರ ಮನೋಭಾವವೇನು? ಭಾರತೀಯ ಬುದ್ದಿಜೀವಿಗಳ ಕೊಡುಗೆಯೆಷ್ಟು? ಅದರ ವಿರುದ್ಧ ವೈಚಾರಿಕ ಹೋರಾಟದ ಅವಶ್ಯಕತೆಯೇನು ಎಂಬುದನೆಲ್ಲಾ ಪುಸ್ತಕದಲ್ಲಿ ವಿಸ್ತ್ರತವಾಗಿ ಚರ್ಚಿಸಲಾಗಿತ್ತು.
ಮುಖ್ಯವಾಗಿ ಅದರಲ್ಲಿ ಹಿಂದು ಶ್ರದ್ಧಾಕೇಂದ್ರಗಳನ್ನು ಹೇಗೆ ಗುರಿ ಮಾಡಲಾಗುತ್ತದೆ ಎಂಬುದನ್ನು ಉಲ್ಲೇಖಿಸಲಾಗಿತ್ತು. ತಮಗೆ ಅರಿವಿಲ್ಲದಂತೆ ಹಿಂದು ಶ್ರದ್ಧೆಗಳ ಮೇಲೆ ಹೇಗೆ ಗುರಿ ಮಾಡಲಾಗುತ್ತದೆ ಎಂಬುದನ್ನು ಸಾಕ್ಷಿಸಮೇತ ಹೇಳಲಾಗಿತ್ತು. ಪುಸ್ತಕ ಬಿಡುಗಡೆಯಾದ ಹೊತ್ತಲ್ಲಿ ಆರಾವಳಿ ಬೆಟ್ಟಗಳ ಶಿಖರ್ ಜಿಯಲ್ಲಿ ಪ್ರತಿಭಟನೆ ಆರಂಭವಾಗಿತ್ತು, ಇನ್ನೊಂದೆಡೆ ಗಯಾದಲ್ಲಿ ಬೌದ್ಧ ಬಿಕ್ಷುಗಳ ಪ್ರತಿಭಟನೆ ಆರಂಭವಾಗಿತ್ತು. ತಿರುಪತಿ ಲಾಡುವಿನಲ್ಲಿ ಶುಚಿತ್ವವಿಲ್ಲ ಎಂಬ ಸುದ್ದಿ ಹರಡುತ್ತಿತ್ತು. ಈ ಎಲ್ಲಾ ಸಂಗತಿಗಳು ಅಗತ್ಯಕ್ಕಿಂತ ಹೆಚ್ಚು ಸುದ್ದಿಯಾದವು. ಪ್ರಜ್ಞಾವಂತರಿಗೆ ಇವೆಲ್ಲವೂ ಭಾರತ ಭಂಜನದ ಹುನ್ನಾರಗಳೆಂದೇ ಅನಿಸುತ್ತಿತ್ತು ಮತ್ತು ಅವೆಲ್ಲವೂ ಸತ್ಯವೇ ಆಗಿತ್ತು.
ಇದೀಗ ಆ ಹುನ್ನಾರದ ಭಾಗವಾಗಿ ಧರ್ಮಸ್ಥಳ ಸುದ್ದಿಯಲ್ಲಿದೆ! ನೂರಾರು ಮೃತದೇಹಗಳನ್ನು ಕಾನೂನುಬಾಹಿರವಾಗಿ ಹೂತುಹಾಕಲಾಗಿದೆ ಎಂಬ ದೂರಿಗೆ ವಿಶೇಷ ತನಿಖಾ ತಂಡದ ರಚನೆಯೂ ಆಗಿ, ಶೋಧ ಕಾರ್ಯವೂ ನಡೆದು ಅವೆಲ್ಲವೂ ಈಗ ಬುರುಡೆ ಎನ್ನುವುದು ಬಹುತೇಕರಿಗೆ ತಿಳಿದಿದೆ. ಅಕ್ರಮ ಪತ್ತೆಗೆ ಮೂಗರ್ಜಿ ಬಂದರೂ ತನಿಖೆ ನಡೆಸಬಹುದೇನೋ ಸರಿ. ಆದರೆ ಕ್ಷೇತ್ರವನ್ನು ಗುರಿ ಮಾಡುವುದೆಂದರೆ...? ಕೆಲ ದಿನಗಳಿಂದ ಶೋಧ ಕಾರ್ಯ ನಡೆಯುತ್ತಿದ್ದರೂ ದೂರುದಾರ ಹೇಳಿದಂತೆ ಯಾವುದೂ ಪತ್ತೆಯಾಗಿಲ್ಲ. ಆತ ಪೂರ್ವಗ್ರಹದಿಂದ, ಯಾರದೋ ಒತ್ತಡ/ ಆಮಿಷಕ್ಕೆ ಒಳಗಾಗಿ ಜನರ ದಾರಿ ತಪ್ಪಿಸುತ್ತಿದ್ದಾನೆಂಬುದು ಮೇಲುನೋಟಕ್ಕೆ ಕಂಡುಬರುತ್ತಿದೆ. ಮುಂದೊಂದು ದಿನ ಯಾವುದೂ ಪತ್ತೆಯಾಗದಿರಬಹುದು. ಆದರೆ ಆ ಹೊತ್ತಿಗೆ ಒಂದು ಶ್ರದ್ಧಾಕೇಂದ್ರದ ಮೇಲೆ ಎಷ್ಟು ಅಪಚಾರ ಮಾಡಬಹುದೋ ಅಷ್ಟನ್ನು ಮಾಡಿಯಾಗಿದೆ. ಅಂದರೆ ಬ್ರೇಕಿಂಗ್ ಇಂಡಿಯಾ ತಂಡ ಧರ್ಮಸ್ಥಳದವರೆಗೂ ಮುಟ್ಟಿದೆ. ದಕ್ಷಿಣ ಭಾರತದ ಪ್ರಮುಖ ಹಿಂದು ಶ್ರದ್ಧಾಕೇಂದ್ರದ ಮೇಲಿನ ಜನರ ನಂಬಿಕೆಯನ್ನು ಘಾಸಿಗೊಳಿಸುವ ಮೂಲಕ ಧರ್ಮಶ್ರದ್ಧೆಯನ್ನು ಹಾಳುಗೆಡವಬಹುದೆಂಬುದು ಭಾರತ ವಿರೋಧಿಗಳ ಪುರಾತನ ತಂತ್ರ. ಇಂದು ಧರ್ಮಸ್ಥಳದಲ್ಲಿ ಎಲ್ಲವೂ ಹಾಗೆಯೇ ನಡೆಯುತ್ತಿದೆ. ಗಾಳಿ ಸುದ್ದಿಗಳನ್ನು ಹರಡುವುದು, ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡುವುದು, ಚಳವಳಿಗಳ ನೆಪದಲ್ಲಿ ಆಶಾಂತಿ ಸೃಷ್ಟಿಸುವುದು ಮತ್ತು ಹೋರಾಟದ ನೆಪದಲ್ಲಿ ಸಲೆಬ್ರಿಟಿಗಳ ಪರೇಡ್ ನಡೆಸುವುದೆಲ್ಲವೂ ಬ್ರೇಕಿಂಗ್ ಇಂಡಿಯಾದ ಹಳೆಯ ಶಕ್ತಿಯ ಜಾಗರಣವೊಂದೇ ಉತ್ತರವಾಗಬಲ್ಲದು.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೪-೦೮-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಆಗಸ್ಟ್ ೧೪, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬