ಸ್ಟೇಟಸ್ ಕತೆಗಳು (ಭಾಗ ೧೪೩೪) - ಇನ್ಸೂರೆನ್ಸ್
ಬರಹಗಾರರ ಬಳಗ
ಸೆಪ್ಟೆಂಬರ್ ೦೬, ೨೦೨೫
೮ ವೀಕ್ಷಣೆಗಳು
ಮನೆಯನ್ನ ಇನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತ ಹರೀಶನಿಗೆ ಅನ್ನಿಸಿತು. ಆತ ರಾತ್ರಿ ಹಗಲು ಕಷ್ಟಪಟ್ಟಿದ್ದ. ದುಡಿಮೆಯ ಹಣವೆಲ್ಲ ಆತನ ಆರೋಗ್ಯದ ಏರು ಪೇರಿಗೆ ಖರ್ಚಾಗುತ್ತ ಹೋಯಿತು. ಮಕ್ಕಳ ಶಿಕ್ಷಣವಾಗಬೇಕು ಮನೆಯೊಂದನ್ನ ಕಟ್ಟಿಕೊಡಬೇಕು, ಮನೆ ನೆಮ್ಮದಿಯಲ್ಲಿರಬೇಕು ಇದೆಲ್ಲವೂ ಸಾಧ್ಯವಾಗಬೇಕಾದರೆ ಕನಸಿಂದ ಮಾತ್ರ ಸಾಧ್ಯ. ಮನಸಲ್ಲದು ಸಾಧ್ಯವಾಗುವುದಿಲ್ಲ ಅನ್ನೋದು ಅವನು ಯೋಚನೆ. ಮಾಡಿದರೂ ಕೂಡ ಸಾಲವನ್ನು ಕಟ್ಟುವುದರಲ್ಲಿ ಜೀವನ ಹೋಗುತ್ತದೆ. ವಿನಃ ಬದುಕು ಬದಲಾಗುವುದಿಲ್ಲ. ಹಾಗಾಗಿ ಗಟ್ಟಿ ನಿರ್ಧಾರವನ್ನು ಮಾಡಿಕೊಂಡಿದ್ದ. ನಾನಿಲ್ಲವಾದರೆ ಈ ಮನೆ ನೆಮ್ಮದಿಯಿಂದ ಇರುತ್ತದೆ. ನಾನಿಲ್ಲವಾದರೆ ಅವರ ಬದುಕು ಖಂಡಿತ ಬದಲಾಗುತ್ತ. ಮರುದಿನ ಬೆಳಗ್ಗೆ ಆತ ಉಸಿರು ನಿಲ್ಲಿಸಿದ್ದ. ಒಂದು ವಾರದ ನಂತರ ಅವನು ಕಟ್ಟಿದ ವಿಮೆಯ ಹಣ ಮನೆಯವರನ್ನ ಬಂದು ಸೇರಿತು. ಮನೆಯವರ ಬದುಕು ಬದಲಾಗಿತ್ತು. ಓದು ಮುಂದುವರಿಯಿತು. ಮನೆ ಚೆನ್ನಾಗಿ ಆಯ್ತು ಎಲ್ಲವೂ ಒಳಿತಗೊದಕ್ಕೆ ಹರೀಶನ ಪ್ರಾಣ ದೇವರ ಪಾದ ಸೇರಬೇಕಿತ್ತು. ವಿಮೆಯ ಹಣ ಮನೆಯನ್ನು ಬೆಳಗಿಸಿತು. ಬದುಕಿದ್ದಾಗ ಪ್ರತಿದಿನವೂ ನೋವಿನಿಂದ ಕೊರಗುತ್ತಿದ್ದ ಹರೀಶನ ಆತ್ಮ ಸತ್ತ ಮೇಲೆ ನೆಮ್ಮದಿಯನ್ನು ಪಡೆಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೦೬, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬