ಸ್ಟೇಟಸ್ ಕತೆಗಳು (ಭಾಗ ೧೪೪೧) - ಸರಕಾರ
ಬರಹಗಾರರ ಬಳಗ
ಸೆಪ್ಟೆಂಬರ್ ೧೩, ೨೦೨೫
೭ ವೀಕ್ಷಣೆಗಳು
ಅಯ್ಯೋ ಇದು ಜನರ ಸರಕಾರವಲ್ಲ, ಆಯ್ಕೆಯಾದ ನಾಯಕರ ಸರಕಾರ. ಅವರಿಗೆ ಬೇಕಾದ ಹಾಗೆ ತೀರ್ಮಾನಗಳು, ಕೆಲಸಗಳು ನಡೆಯುತ್ತವೆ. ಮತ್ತೊಮ್ಮೆ ಅಧಿಕಾರ ಪಡೆಯುವುದ್ದಕ್ಕೆ, ಹೆಚ್ಚು ಹಣ ಸಂಪಾದನೆಯ ದಾರಿ ನೋಡಿಕೊಳ್ಳುತ್ತಾರೆ, ಮತ ದಾನನೀಡಿದವರು ಸತ್ತರೆಷ್ಟು ಬಿಟ್ರೆಷ್ಟು, ನಮ್ಮ ಉಸಿರಿಗೆ ಬೆಲೆ ಇಲ್ಲ. ನಾವು ಅವರಿಗೆ ಯಕಶ್ಚಿತ್, ನಮಗೆ ಬೇಕಾದ ಕೆಲಸಗಳು ಅವರಿಂದ ಆಗುವುದಿಲ್ಲ. ನಾವು ಮಾಡುವ ಪ್ರತಿಭಟನೆ, ಹೋರಾಟ ಯಾವುದೂ ಅವರಿಗೆ ಲೆಕ್ಕಕ್ಕೆ ಇಲ್ಲ. ಅವರದೇ ಧರ್ಬಾರು ನಡೆಸುತ್ತಾರೆ. ಅಲ್ಲೋ ಇಲ್ಲೋ ಒಂದೆರಡು ಒಳಿತಿನ ಕೆಲಸಗಳು ಆಗುತ್ತವೆ ಅಂತ ನಾವಂದುಕೊಳ್ಳಬೇಕು. ಎಲ್ಲರೂ ಕೈಗೊಂಬೆಗಳು, ನಾವು ವ್ಯರ್ಥವಾಗಿ ಬಲಿಯಾಗುತ್ತೇವೆ. ಈ ಹೋರಾಟ ಮುಗಿಯುತ್ತದೆ, ಹೊಸತೊಂದು ಸಮಸ್ಯೆ ಆರಂಭಿಸುತ್ತಾರೆ, ನಮ್ಮ ಗಮನ ಬೇರೆಡೆಗೆ ತಿರುಗಿಸುತ್ತಾರೆ. ಅವರಿಗೆ ನಮ್ಮಿಂದ ಮತ ಮಾತ್ರ ಬೇಕಾಗಿರೋದು. ನಿಮಗೆಷ್ಟು ಹೇಳಿದರೂ ಅರ್ಥವಾಗುವುದಿಲ್ಲ. ಹೀಗೆಂದು ಕಿರುಚಾಡುತ್ತಿದ್ದಾನೆ. ಅವನಿಗೋ ಕೆಲವು ವರ್ಷಗಳಿಂದ ಹುಚ್ಚು ಹಿಡಿದಿದೆ. ತನ್ನವರನ್ನ ಕಳೆದುಕೊಂಡಿದ್ದಾನೆ. ಪರಿಹಾರ ಕೊಡಬೇಕಾದವರು ಅಲೆದಾಡಿಸಿ ಕೈ ತೊಳೆದುಕೊಂಡಿದ್ದಾರೆ. ದಿಕ್ಕಿಲ್ಲದವ ಜನರಿಗೆ ದಿಕ್ಕು ತೋರಿಸುತ್ತಿದ್ದಾನೆ, ಆದರೆ ಕೇಳುವವರಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೧೩, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬