ಅವಳಿಗೆ ಬೇಕಿದ್ದದ್ದು ಅವನ ಹೆಗಲ‌ ಆಧಾರ. ಹೆಚ್ಚೇನು ಬಯಸಿದವಳಲ್ಲ. ಅವನೊಂದಿಗೆ ಸಂತೋಷದಿಂದ‌ ನೆಮ್ಮದಿಯಿಂದ ಕಾಲ‌ ಕಳೆಯಬೇಕು. ಎಲ್ಲರೂ ಬೇಡವೆಂದರೂ ಆಕೆಯ ಆಯ್ಕೆ ಅವನಾಗಿದ್ದ. ಅವನಲ್ಲಿ‌ ಸಮಾಜಕ್ಕೆ ಕಾಣುವಂತಹ ಶ್ರೀಮಂತಿಕೆ ಇರಲಿಲ್ಲ. ಗುಣವೋ ಅಪರಂಜಿ. ಅವಳು ಕಾಯುತ್ತಿರುವುದು ಸಮಾಜದ ಮುಂದೆ ತಲೆ ಎತ್ತಿ ಬದುಕಬೇಕು. ಮಾದರಿಯಾಗಬೇಕು. ಮನೆಯವರು ಮೆಚ್ಚಿ ಒಳಿತಾಗಲಿ ಎನ್ನುವಂತಿರಬೇಕು. ಆತನಿಗೋ ಆಕೆಯೇ ಪ್ರಪಂಚ. ಅವಳ‌ ನಗುವಿಗೆ ನೆಮ್ಮದಿಗೆ ದುಡಿಯುತ್ತಿದ್ದಾನೆ. ಹೊಸ ಹೊಸ ಕೆಲಸಗಳ ಅನ್ವೇಷಿಸುತ್ತಿದ್ದಾನೆ. ಅವಳ ಕನಸನ್ನ  ನನಸಾಗಿಸಲು ಶ್ರಮವಹಿಸುತ್ತಿದ್ದಾನೆ. ಪರಿಸ್ಥಿತಿ ಸರಿಯಾಗಿ ಜೊತಡ ಸೇರುತ್ತಿಲ್ಲ. ಎಲ್ಲ ಕಡೆಯಲ್ಲೂ ಸೋಲು ಕಾಯುತ್ತಾ ಕುಳಿತಿದೆ. ಆತನಿಗೆ ಭಯವಿಷ್ಟೆ ಆಕೆಯ ಕನಸುಗಳು ಹಾಗೆಯೇ ಉಳಿದರೆ ಕೈ ಹಿಡಿದದ್ದಕ್ಕೆ ಅರ್ಥವೇನು? ನನಸಾಗಿಸಬೇಕಾದ ತಾನೇ ಹೀಗೆ ದಿನವನ್ನ ದೂಡುತ್ತಾ ಹೊರಟರೆ ಮುಂದೇನು? ಎಲ್ಲರ ಪ್ರಶ್ನೆಗಳಿಗೆ ಉತ್ತರ ನೀಡೋದು ಯಾವಾಗ? ಒಟ್ಟಿನಲ್ಲಿ ಎರಡು ಜೀವಗಳು ಬದುಕಿನ ಬದಲಾವಣೆಗೆ ಕಾಯುತ್ತಿವೆ. ವಿಧಿಯೂ ಕೂಡಾ… -ಧೀರಜ್ ಬೆಳ್ಳಾರೆ ಚಿತ್ರ ಕೃಪೆ: ಇಂಟರ್ನೆಟ್ ತಾಣ