ಮನೆಯಲ್ಲಿ ಮಡದಿ ಮತ್ತೆ ಮತ್ತೆ ಹೇಳಿದಳು ಸಾದ್ಯವಾಗದಷ್ಟು ಕೆಲಸ ತಲೆ‌ಮೇಲೆ ಹೊತ್ತುಕೊಳ್ಳಬೇಡ, ಯಾವುದೂ ಸರಿಯಾಗಿ ಕೊನೆಯಾಗುವುದಿಲ್ಲ. ಅವಳು ಎಷ್ಟು ಸಲ‌ ಹೇಳಿದರೂ ನನ್ನ ಉತ್ತರ‌ ಒಂದೇ  ಆಗಿತ್ತು. ಈಗ ದುಡಿಯಬೇಕು, ಮನಸ್ಸು ಮಾಡಿದರೆ ಎಷ್ಟು ಕೆಲಸವನ್ನೂ ಮಾಡಬಹುದು.‌ ನಾನು ಖಂಡಿತಾ ನಿಭಾಯಿಸ್ತೇನೆ. ಹೀಗೆ ಇಬ್ಬರ ನಡುವೆ ವಾದ ಮುಂದುವರಿಯುತ್ತದೆ. ನಾನು ಮಾತು ಕೇಳೋ ಜಾಯಮಾನದವನಲ್ಲ. ಅವತ್ತು ಅಡುಗೆ ಮನೆಯಿಂದ ಮನೆಗೆ ಬಂದ ಅತಿಥಿಗಳಿಗೆ ಚಹಾ ತರುವ ಜವಾಬ್ದಾರಿ ನನ್ನದಾಗಿತ್ತು. ಒಂದೇ ಸಲ ಎಲ್ಲರಿಗೂ ಒಟ್ಟಿಗೆ ತರೋಣ ಅಂತ ನಿರ್ಧರಿಸಿ ನನ್ನ ಕೈಯಲ್ಲಿ ಎರಡು ಗ್ಲಾಸ್  ಹಿಡಿದುಕೊಳ್ಳಲು ಸಾದ್ಯವಾದರೂ ನಾನು 4ನ್ನು ತರುವ ಸಾಹಸಕ್ಕೆ ಕೈ ಹಾಕಿದೆ. ಅತಿಥಿಗಳ ಹತ್ತಿರ ತಲುಪುವ ಮೊದಲೇ ಕೈಯಿಂದ ಜಾರಿ ಬಿದ್ದು ಮಡದಿಯಿಂದ ಬೈಗುಳದ ಉಡುಗೊರೆ ತೆಗೆದುಕೊಂಡೆ. ಆಗಲೇ ಅರ್ಥವಾಗಿತ್ತು. ಕೈಯಲ್ಲಿ ಸಾದ್ಯವಾಗಿರೋದ್ದನ್ನ ಮಾತ್ರ ನಿಭಾಯಿಸಬೇಕು. ಅರ್ಥಮಾಡಿಸೋಕೆ‌ ಮನೆಗೆ ಅತಿಥಿಗಳು ಬರಬೇಕಾಯಿತು. -ಧೀರಜ್ ಬೆಳ್ಳಾರೆ ಚಿತ್ರ ಕೃಪೆ: ಇಂಟರ್ನೆಟ್ ತಾಣ