‘ಸಂಪದ’ ನಗೆಬುಗ್ಗೆ - ಭಾಗ ೧೪೦
ಕೆ.ಪಿ.ಅಶ್ವಿನ್ ರಾವ್
ಸೆಪ್ಟೆಂಬರ್ ೨೭, ೨೦೨೫
೨೦ ವೀಕ್ಷಣೆಗಳು
ಸಕಾರಣ!
ಸೂರಿ: ಲೋ ಗಾಂಪಾ, ನಿನ್ನೆ ರಾತ್ರಿ ನಿಮ್ಮನೇಲಿ ಅಷ್ಟು ಗಲಾಟೆ ಯಾಕೋ? ಏನ್ಮಾಡ್ಡೆ?
ಗಾಂಪ: ಅಯ್ಯೋ ಏನೇಳೋದು ಸೂರಿ, ನಮ್ಮಪ್ಪಾ ಅಮ್ಮಂದೇ ಸಮಸ್ಯೆ ಕಣೋ
ಸೂರಿ: ಯಾಕೆ, ಏನಾಯ್ತು?
ಗಾಂಪ: ಮೊನ್ನೆ ಸಂಘದವರು ಆದರ್ಶ ದಂಪತಿಗಳು ಬಿರುದು ಕೊಟ್ಟು ಸನ್ಮಾನಿಸಿರೋದೇ ಪ್ರಮಾದ ಆಗಿದೆ ಕಣೋ.
ಸೂರಿ: ನಿಮ್ಮಪ್ಪಾ ಅಮ್ಮನ್ನ ಸನ್ಮಾನಿಸಿರೋದು ಹೆಮ್ಮೆ, ಸಂತಸ ಪಡೋ ವಿಷಯ ಅಲ್ವೇನೋ. ಅದರಲ್ಲಿ ಏನ್ ಸಮಸ್ಯೆ?
ಗಾಂಪ: ಖುಷಿ ಪಡೋ ಬದ್ಲು ತಲೆ ಚಚ್ಕೊಳ್ಳೋ ಹಾಗಾಗಿದೆ. ಅವರನ್ನು ಯಾಕಾದ್ರೂ ಸನ್ಮಾನಿಸಿದ್ರೋ ಬಹುಮಾನ ದೊರೆತದ್ದೇ ನನ್ನಿಂದ ಅಂತ ಅಪ್ಪ, ನನ್ನಿಂದಲೇ ಅಂತ ಅಮ್ಮ! ಅರಚಾಟಕ್ಕೆ ನನಗೋ ನಿದ್ದೇನೇ ಇಲ್ಲ ಕಣೋ!
***
ಗಾಜಿನ ಲೋಟ
ಸೂರಿ ಮತ್ತು ಶ್ರೀಮತಿ ನಡುವೆ ದೊಡ್ಡ ಜಗಳ ನಡೆದು, ಸೂರಿ ಮನೆ ಬಿಟ್ಟು ಹೋದ. ಶ್ರೀಮತಿ ಕರೆ ಮಾಡಿ ಮನೆಗೆ ಬರುವುದಕ್ಕೆ ಬೇಡಿಕೊಂಡಳು.
ಸೂರಿ: ನಿನ್ನ ಪಕ್ಕದಲ್ಲೇನಿದೆ?
ಶ್ರೀಮತಿ: ಗಾಜಿನ ಲೋಟ,
ಸೂರಿ: ಅದನ್ನು ಜೋರಾಗಿ ಎತ್ತಿ ಹಾಕಿದರೆ ಏನಾಗುತ್ತದೆ?
ಶ್ರೀಮತಿ: ಒಡೆದು ಹೋಗುತ್ತದೆ.
ಸೂರಿ: ಒಡೆದು ಗಾಜಿನ ಲೋಟದ ಚೂರುಗಳನ್ನು ಸೇರಿಸಿ ಮತ್ತೆ ಮೊದಲಿನಂತೆ ಮಾಡಲು ಆಗುತ್ತಾ? ಇಲ್ಲ ತಾನೇ ಹಾಗೆಯೇ ನನ್ನ ಮನಸ್ಸು ಒಡೆದು ಹೋಗಿದೆ. ಮತ್ತೆ ಸೇರಿಸೋಕೆ ಆಗಲ್ಲ, ಅಂದರೆ ವಾಪಸ್ ಮನೆಗೆ ಬರಕ್ಕಾಗಲ್ಲ.
ಸೂರಿ: ಸರಿ ಬಿಡಿ, ಹೊಸ ಲೋಟ ತರ್ತೀನಿ.
***
ಹಣ ಕೊಡ್ತಾರೆ !
ಶ್ರೀಮತಿ ತರಕಾರಿ ಹೆಚ್ಚುತ್ತಾ ಕುಳಿತಿದ್ದಳು. ಪಕ್ಕದಲ್ಲಿದ್ದ ಸೂರಿ, ಟೀವಿಯಲ್ಲಿ ರೊಮ್ಯಾನ್ಸ್ ಸಾಂಗ್ ನೋಡಿ ಖುಷಿ ಪಡುತ್ತಿದ್ದ.
ಶ್ರೀಮತಿ: ಟಿ ವಿಯಲ್ಲಿ ಹೀರೋ, ಹೀರೋಯಿನ್ ರೊಮ್ಯಾನ್ಸ್ ಸಾಂಗ್ ನೋಡಿ ಖುಷಿ ಪಡುವ ಬದಲು ನನ್ನ ಜೊತೆಯೂ ರೊಮ್ಯಾನ್ಸ್ ಸಾಂಗ್ ಹಾಡಬಹುದಪ್ಪ.
ಸೂರಿ: ರೊಮ್ಯಾನ್ಸ್ ಸಾಂಗ್ ಮಾಡುವುದಕ್ಕೆ ಅವರಿಗೆ ದುಡ್ಡು ಕೊಡುತ್ತಾರೆ. ನೀನೇನಾದ್ರೂ ಕೊಡ್ತಿಯೇನು?
***
ಅಪಾಯ
ಶ್ರೀಮತಿ: ರೀ, ಕಟ್ಟಿ ಕೊಂಡ ಹೆಂಡತಿ ಹಾಗೂ ಹೆಲ್ಮೆಟ್ ಎರಡು ಒಂದೇ ನೋಡಿ.
ಸೂರಿ: ಅದೆಂಗೆ ಹೇಳುತ್ತೀಯಾ?
ಶ್ರೀಮತಿ: ಎರಡನ್ನೂ ತಲೆ ಮೇಲೆ ಇಟ್ಟುಕೊಳ್ಳದಿದ್ದರೆ ನಿಮ್ಮ ಜೀವಕ್ಕೇ ಅಪಾಯ!
***
ಮಂಗ ಸಿಗುತ್ತೆ !
ಶ್ರೀಮತಿ: ಅಲ್ಲಾರಿ, ಗಂಡಸರು ಬೇಗ ಸತ್ರೆ ಸ್ವರ್ಗದಲ್ಲಿ ಅಪ್ಸರೆಯರು ಸಿಗ್ತಾರಂತೆ, ಹೌದಾ”
ಸೂರಿ: ಹೌದು ಕಣೇ..
ಶ್ರೀಮತಿ: ಮತ್ತೆ, ಹೆಂಡತಿ ಬೇಗ ಸತ್ರೆ?
ಸೂರಿ: ಮಂಗ ಸಿಗುತ್ತೆ.
ಶ್ರೀಮತಿ: ಇದೇನು ಅನ್ಯಾಯ? ನಿಮಗೆ ಮಾತ್ರ ಇಲ್ಲೂ ಅಪ್ಸರೆ, ಅಲ್ಲೂ ಅಪ್ಸರೆ, ನಮಗೆ ಇಲ್ಲೂ ಮಂಗ, ಅಲ್ಲೂ ಮಂಗನಾ?
***
(ಸಂಗ್ರಹ)
ಪ್ರಕಟಿಸಿದ: ಸೆಪ್ಟೆಂಬರ್ ೨೭, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬