ಸ್ಟೇಟಸ್ ಕತೆಗಳು (ಭಾಗ ೧೪೫೬) - ಬೇರೆ
ಬರಹಗಾರರ ಬಳಗ
ಸೆಪ್ಟೆಂಬರ್ ೨೮, ೨೦೨೫
೧೦ ವೀಕ್ಷಣೆಗಳು
ಅವನು ಸಮುದ್ರ ತೀರದಲ್ಲಿ ಮನೆ ಖರೀದಿಸಿದ್ದಾನೆ. ಅವನಿಗೆ ವಿಪರೀತ ಆಸೆ ಆ ಕಾರಣಕ್ಕೆ ಅಲ್ಲೊಂದು ದೊಡ್ಡದಾದ ಮನೆಯನ್ನು ಖರೀದಿಸಿ ಬಿಟ್ಟಿದ್ದಾನೆ. ಅವನ ಮನೆಯ ಕೋಣೆಯ ಕಿಟಕಿಗೆ ಹೊರಗಿನ ಸಮುದ್ರ ತೀರದ ಸುಂದರ ದೃಶ್ಯ ಕಣ್ಣ ಮುಂದೆ ಕಾಣುತ್ತದೆ, ಅದು ಆತನ ಮನಸ್ಸಿಗೆ ಉಲ್ಲಾಸವನ್ನು ಕೊಡುತ್ತದೆ ಸಂಭ್ರಮವನ್ನು ಕೊಡುತ್ತದೆ. ಬದುಕಿಗೆ ಬದುಕುವ ಆಸೆಯನ್ನು ಹೆಚ್ಚಿಸುತ್ತದೆ. ಕೆಲವು ವರ್ಷಗಳು ದಾಟಿದೆ ಅಷ್ಟೇ. ಆರೋಗ್ಯ ಕಳೆದುಕೊಂಡು ಆಸ್ಪತ್ರೆಯ ಕೋಣೆಯೊಳಗೆ ಮಲಗಿದ್ದಾನೆ ಬದುಕುವ ಆಸೆ ಇದೆ ಆದರೆ ದೇಹ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ ಈಗ ಆಸ್ಪತ್ರೆಯ ಕಿಟಕಿಯ ಒಳಗಿಂದಲೂ ಹೊರಗಡೆ ಸಮುದ್ರ ಕಾಣುತ್ತಿದೆ ಬದುಕಿನ ಆಸೆ ಹೆಚ್ಚಿಸುವ ದೃಶ್ಯಗಳು ಕಾಣುತ್ತಿದೆ. ಆದರೆ ಬದುಕುವುದಕ್ಕೆ ಸಾಧ್ಯವಾಗ್ತಾಯಿಲ್ಲ ಉಸಿರು ಕಡಿಮೆಯಾಗುತ್ತಿದೆ ದೃಶ್ಯವೊಂದೇ ಸನ್ನಿವೇಶಗಳು ಬೇರೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೨೮, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬