ನಾನಿನ್ನೂ ಆಗ ಎಂ ಎ ವಿದ್ಯಾರ್ಥಿನಿ. ೬೭ನೇ ಸಾಹಿತ್ಯ ಸಮ್ಮೇಳನ ಕನಕಪುರದಲ್ಲಿ ನಡೆಯುವುದಿತ್ತು. ಭೈರಪ್ಪನವರು ಆ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎವಿಕೆ ಕಾಲೇಜಿನಲ್ಲಿ ಅವನಿಗೆ ಅಭಿನಂದನಾ ಸಮಾರಂಭ, ಅಭಿನಂದನೆಗಳನ್ನು ಸ್ವೀಕರಿಸಿದ ಬಳಿಕ ಅವರ ನುಡಿಗಳನ್ನು ಕೇಳಲು ಕಾತರಳಾಗಿದ್ದೆ. ಅವರು ಹೇಳಿದ ‘ಉತ್ಸವ ಮೂರ್ತಿ ಊರಾಡಿದಷ್ಟು ಮೂಲ ದೇವರ ಮಹಿಮೆ ಕಡಿಮೆಯಾಗುತ್ತದೆ' ಎನ್ನುವ ಮಾತು ತಲೆಯ ಮೇಲೆ ಹೊಡೆದ ಹಾಗಿತ್ತು ಎಷ್ಟು ಸತ್ಯ! ಅವರ ಮಾತು ಅನ್ನಿಸಿತು. ಹಾಗೆ ಎತ್ತಿಕೊಂಡ ಕಾದಂಬರಿ 'ಗೃಹಭಂಗ'. ಆದರ ನಂತರದ ಭಾಗ ಎಂದು ಹೇಳುವಂಥದ್ದು 'ಅನ್ವೇಷಣ'. 'ಗೃಹಭಂಗ'ದ ನಂಜಿಯಂಥ ಪಾತ್ರಗಳು, ಆಚರಣೆಯ ವಿವರಗಳು ಇಲ್ಲೂ ಬರಬಹುದು ಎಂದ ನನಗೆ ಕಾದಂಬರಿಯ ತಂತ್ರ ಬಹುವಾಗಿ ಸೆಳೆಯಿತು. ಕಾದಂಬರಿಯಲ್ಲಿ ಬರುವ ನಾಯಕ ಪಾತ್ರಧಾರಿ ವಿಶ್ವನ ಹುಡುಕಾಟದಲ್ಲಿ ಅವನ ಅಜ್ಜ ಕಂಠಿಜೋಯಿಸ ಇರುತ್ತಾರೆ. ತಾಯಿಯ ಸಾವಿನ ನಂತರದ ಜೀವನ ವಿಶ್ವನದ್ದಾಗುತ್ತದೆ. ಮೊಮ್ಮಗನ ಅಸ್ತಿತ್ವ ಸತ್ಯ ಹಾಗೂ ಜೀವನದ ಏಕತೆಯನ್ನು ಅರಸಿಕೊಡಂತಿದೆ. ವಿಶ್ವ ನೇರವಾಗಿ ಕಾಣದೆ ಅವನ ಗುಣ ಸ್ವಭಾವ ಬೇರೆ ಜನರನ್ನು ಪ್ರಭಾವಗೊಳ್ಳುವಂತೆ ಮಾಡುತ್ತದೆ ಇಲ್ಲಿ ಹಾಸನದ ಆರಸೀಕೆರೆ, ಚನ್ನರಾಯಪಟ್ಟಣ ಅರಕಲಗೂಡು, ಹಾಸನ ಬಂದು ಕಡೆಗೆ ರಾಣೆಬೆನ್ನೂರು, ಹುಬ್ಬಳ್ಳಿ, ಮುಂಬಯಿಗಳ ವಿವರ ನೀಡುತ್ತದೆ. ನಾಯಕ ಪಟ್ಟಪಾಡುಗಳು ಇಲ್ಲಿ ಅನಾವರಣವಾಗುತ್ತವೆ. ನಾಯಕ ಕಟ್ಟಿಕೊಂಡ ಹೆಂಡತಿಯನ್ನು ಬಿಡುತ್ತಾನೆ ವಿಶ್ವನ ಒಡನಾಟದಲ್ಲಿದ್ದ ಮೇಷ್ಟ್ರು ಅವನಲ್ಲಿ ಮೋಹಗೊಳ್ಳುವ ನಟಿ ಎಲ್ಲವನ್ನೂ ಸರಿ ಮಾಡುವೆ ಎಂದು ಸಲಿಂಗಕಾಮದಿಂದ ತಿರಸ್ಕಾರವಾಗುವ ಸ್ವಾಮಿಗಳ ಒಳಗಿನ ವಿವರಗಳು ಇಲ್ಲಿ ಮುಖ್ಯವಾಗುತ್ತವೆ. 'ಅನ್ವೇಷಣ' ಎಂದರೆ ಹುಡುಕು ಎಂದಾಗುತ್ತದೆ ಅಂದರೆ, ವಿಶ್ವನ ಹುಡುಕಾಟವೇ ಇಲ್ಲಿ ಬರುತ್ತದೆ ಆದರೆ, ವಿಶ್ವ ನೆಪ ಅಷ್ಟೇ. ಇಲ್ಲಾಗುವಂಥ ಅನೇಕ ಘಟನೆಗಳು ಅವನ ಸಂಗಡ ಬೇರೆ ಮತುಗಳು ತಮ್ಮ ಗುಣಸ್ವಭಾವದ ಬಗ್ಗೆ ಮಾಹಿತಿ ನೀಡುತ್ತದೆ. ಅವುಗಳು ನಮ್ಮ ಸುತ್ತ ಇರಬಹುದು ಎಂಬ ಸಂದೇಹ ನಮ್ಮನ್ನು ಕಾಡುತ್ತದೆ ಅನ್ವೇಷಣೆ ಕಾದಂಬರಿಯ ಕುರಿತು ಓದುಗರು ಹೊಸ ದಿಕ್ಕನ್ನು ಅನುಸರಿಸಬಹುದು ಇಲ್ಲಿ ಬರುವ ಬೆನ್ನುಪಣಿಗೆ ಚಿಕಿತ್ಸೆಯನ್ನು ಟೆಂಟಿನಿಮಾ. ರೈಲುಹಳಿ, ಹೊಲಿಗೆ ಯಂತ್ರವನ್ನು ಮನುಷ್ಯ ಅನ್ವೇಷಿಸಿದ ಆದರೆ, ಭೈರಪ್ಪನವನ್ನು ಅರಸಿ ಹೊರಟದ್ದು ನೀರನ್ನು ಹರಿಸುವ ಮಾರ್ಗವನ್ನು ಹಾಸನ ಜಿಲ್ಲೆಯ ಅತ್ಯಂತ ಬರಪೀಡಿತ ಪ್ರದೇಶ ಅಂದರೆ ತುಮಕೂರು ಜಿಲ್ಲೆಗೆ ಹೊಂದಿಕೊಂಡಿರುವ ಭಾಗ ಈ ಭೂಮಿಗೆ ಭಗೀರಥ ಎಂದರೆ ಇವರೇನೆ! ಸರಕಾರಕ್ಕೆ ಮೇಲೆ ಮೇಲೆ ಮನವಿ ಕೊಟ್ಟು ನೀರು ಹರಿಸಿದ ಸಂತ ಈ ಕಾರಣಕ್ಕಾಗಿ ಅವರ ಕಾರ್ಯವನ್ನು ಸ್ಥರಿಸಲು ಇವರ ಹುಟ್ಟೂರು ಸಂತೇಶಿವರದಲ್ಲಿ ಕಾರ್ಯಕ್ರಮವನ್ನು ಆ ಭಾಗದ ಶಾಸಕರಾದಿಯಾಗಿ ಹಮ್ಮಿಕೊಂಡಿದ್ದರು. ಅವರ ಕಾದಂಬರಿಗಳು ನಿರಂತರ ಅಧ್ಯಯನದ ಫಲವಾಗಿ ಬರುತ್ತಿದ್ದವು. ಅವರ ಕೃತಿಗಳು ಉಪನಿಷತ್ತು ಇದ್ದ ಹಾಗೆ… ‘ಚಿನ್ನದ ಲೇಖನಿಯನ್ನು ಪರಂಪರೆಯಿಂದ ಪಡೆಯಬಹುದು ಆದರೆ ಜ್ಞಾನವನ್ನಲ್ಲ' ಎಂಬ ಮಾತಿದೆ ಅದಕ್ಕೆ ವಿರುದ್ದವಾಗಿ ತಮ್ಮ ಜ್ಞಾನಕ್ಕೆ ಪೂರಕವಾಗಿ ಚಿನ್ನದ ಲೇಖನಿಯನ್ನು ಸ್ವೀಕರಿಸಿದವರು ಅವರು ಓದುಗರಿಗೆ ಅನ್ವೇಷಣೆಯ ದಾರಿಯ ಹುಚ್ಚು ಹಿಡಿಸಿ ಹೋಗಿದ್ದರೆ 'ಮಂದ್ರ" 'ತಂತು' ‘ಧಾಟು’ ಪರ್ವ', 'ವಂಶವೃಕ್ಷ 'ನಾಯಿನೆರಳು 'ಸಾಕ್ಷಿ', 'ಅಂಚು', 'ಮತದಾನ', 'ಆವರಣ' ಉತ್ತರಕಾಂಡ' ಕಾದಂಬರಿ ಮೂಲಕ ನಗುಮುಖಿಯಾಗಿ ಮೌನವಾಗಿ ಅವರಿರುತ್ತಾರೆ. -ಸುಮಾವೀಣಾ (ವಿಜಯ ಕರ್ನಾಟಕ ಪತ್ರಿಕೆಯಿಂದ ಆಯ್ದದ್ದು) ಚಿತ್ರ ಕೃಪೆ: ಇಂಟರ್ನೆಟ್ ತಾಣ