ಸದಾಶಿವ ಕ್ರೀಡಾ ಪುರವಣಿಯ ಮುಖಪುಟದ ತಯಾರಿಯಲ್ಲಿ ಮುಳುಗಿದ್ದಾನೆ. ಏಳು ವರುಷಗಳಿಂದ ಅದೇ ಬದುಕು. ಆಸಕ್ತಿ‌ ಇತ್ತು ಆದರೆ ಬದುಕು ಅವಶ್ಯಕತೆಯನ್ನ ನಂಬಿತ್ತು. ಹಗಲು ರಾತ್ರಿ ಏನೂ ಬದಲಾವಣೆ ಇಲ್ಲದೆ ಓಡುತ್ತಿತ್ತು. ಬದುಕಿನಲ್ಲಿ ಏನಾದರೂ ಹೊಸತು ಮಾಡುವ ಆಸೆ ಇದ್ದರೂ ಕಾಲ‌ಕೂಡಿ ಬರುತ್ತಿಲ್ಲ. ಮತ್ತೆ ಬದುಕಿನಲ್ಲಿ ಆಸೆ ಒಡಮೂಡುತ್ತಿದೆ. ಶಿಕ್ಷಣ ಗಟ್ಟಿಯಾದದ್ದೇ ಕ್ರೀಡೆಯಿಂದ, ರಾತ್ರಿ ಹಗಲೆನ್ನದೆ ಓಡಿದ್ದರಿಂದ. ಸತತ ಆಭ್ಯಾಸದ ಫಲವಾಗಿ ಪದಕಗಳು ಕೊರಳಿಗೇರಿದವು. ರಾಜ್ಯ ರಾಷ್ಟ್ರ ಮಟ್ಟದಲ್ಲಿ ದಾಖಲೆಗಳು ಸ್ಥಾಪಿತವಾದವು. ಜವಾಬ್ದಾರಿ ಹೆಚ್ಚಿದಾಗ ಉದ್ಯೋಗದ ಕಡೆಗೆ ಮುಖ ಮಾಡಿದ, ಈಗಲೂ ಕ್ರೀಡಾ ಸುದ್ದಿ ಬರವಣಿಗೆಗೆ ಇಳಿಸುವಾಗ ತಾನು ಮಾಡಿದ ಅಭ್ಯಾಸ ನೆನಪಿಗೆ ಬರುತ್ತವೆ. ಆಸೆ ಮತ್ತು ಬದುಕು ಮತ್ತೆ ಎರಡು ದ್ರುವಗಳಾಗಿ ಕಾಯುತ್ತಿವೆ. ಜೊತೆ ಸೇರುವ ದಿನಗಳು ಬರುತ್ತಿಲ್ಲ. -ಧೀರಜ್ ಬೆಳ್ಳಾರೆ ಚಿತ್ರ ಕೃಪೆ: ಇಂಟರ್ನೆಟ್ ತಾಣ