ವಿಶ್ವಕೋಶಾಗಾರ : ಕನ್ನಡ ಇ-ಪಬ್ ಪುಸ್ತಕಗಳ ತಾಣ
ವಿಶ್ವನಾಥ್ ಡಿ ಎ
ಅಕ್ಟೋಬರ್ ೦೪, ೨೦೨೫
೩೭ ವೀಕ್ಷಣೆಗಳು
ಕನ್ನಡ ಪುಸ್ತಕ, public domain
ಲೇಖನ
ನಮಸ್ಕಾರ, ಬಹಳ ಕಾಲದ ನಂತರ ಇಲ್ಲಿ ಬರೆಯುತ್ತಿದ್ದೇನೆ. ಮೊಬೈಲ್, ಟ್ಯಾಬ್ಲೆಟ್ ತರಹದ ಉಪಕರಣಗಳಲ್ಲಿ ಪುಸ್ತಕ ಓದುವ ಅಭ್ಯಾಸವಿದ್ದವರಿಗೆ ಸ್ಕ್ಯಾನ್ ಮಾಡಿದ ಪಿಡಿಎಫ್ ಗಳನ್ನು ಓದುವ ಕಷ್ಟ ಗೊತ್ತಿರುತ್ತದೆ. ಪದೆ ಪದೆ ಜೂಮ್ ಮಾಡು ನೋಡುವುದು ತ್ರಾಸಿನ ಕೆಲಸ. ಇಂಗ್ಲಿಷ್ ನಲ್ಲಾದರೆ, ಇದನ್ನು ಸುಲಭಗೊಳಿಸುವ ಇ-ಪಬ್, ಮೊಬಿ ಫಾರ್ಮ್ಯಾಟ್ ಲಭ್ಯವಿದೆ. ಆದರೆ ಕನ್ನಡದಲ್ಲಿ ಅಷ್ಟಿಲ್ಲ. ಅದಕ್ಕಾಗಿಯೇ ನಾನು ಕನ್ನಡದಲ್ಲಿ ಲಭ್ಯವಿರುವ ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿರುವ (Public Domain) ಪುಸ್ತಗಳನ್ನು ಹೊಸ ಮಾದರಿಯ ಪಿಡಿಎಫ್ ಮತ್ತು ಇ-ಪಬ್ ಫಾರ್ಮ್ಯಾಟ್ ಗೆ ಪರಿವರ್ತಿಸಿ ನನ್ನ ಸ್ವಂತ ಬ್ಲಾಗಿನಲ್ಲಿ(vishwakoshaagaara.blogspot.com) ಮತ್ತು archive.org/details/@vishu7334 ಎಂಬಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದೇನೆ. ಇಲ್ಲಿ ಅನಕೃ, ಜಿ.ಪಿ. ರಾಜರತ್ನಂ, ಮಾಸ್ತಿ ಮತ್ತು ಇತರರ ಅನೇಕ ಪುಸ್ತಕಗಳನ್ನು ಹಂಚಿಕೊಂಡಿದ್ದೇನೆ. ಮತ್ತು ಪ್ರತಿ ಪುಸ್ತಕದ ಒಳಗೆ ಅದರ ಸ್ಕ್ಯಾನ್ಡ್ ಪ್ರತಿ ಎಲ್ಲಿ ಲಭ್ಯವಿದೆ ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದೇನೆ. ಇವನ್ನು ಓಸಿಆರ್ ತಂತ್ರಜ್ಞಾನ ಬಳಸಿ ಪರಿವರ್ತಿಸಿ, ತಪ್ಪುಗಳನ್ನೆಲ್ಲಾ ಆದಷ್ಟು ತಿದ್ದಿ, ಓದಲು ಸರಿಯಾಗುವ ಹಾಗೆ ಫಾರ್ಮ್ಯಾಟ್ ಮಾಡಿ, ಇ-ಪಬ್ ಮತ್ತು ಪಿಡಿಎಫ್ ಗೆ ಪರಿವರ್ತಿಸಿ ಹಂಚಿಕೊಂಡಿದ್ದೇನೆ. ಪುಸ್ತಗಳನ್ನು ಡೌನ್‌ಲೋಡ್ ಮಾಡಿ ಓದಿ, ಇತರರೊಂದಿಗೆ ಹಂಚಿಕೊಳ್ಳಿ.
ಪುಸ್ತಕದಲ್ಲಿ ಏನಾದರೂ ದೋಷಗಳು ಕಂಡರೆ, ದೋಷದ ವಿವರದೊಂದಿಗೆ ನನ್ನನ್ನು ಸಂಪರ್ಕಿಸಿ. ತಪ್ಪನ್ನು ಸರಿಪಡಿಸಿ ಮತ್ತೆ ಅಪ್ಲೋಡ್ ಮಾಡುತ್ತೇನೆ.
ಪ್ರಕಟಿಸಿದ: ಅಕ್ಟೋಬರ್ ೦೪, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬