ಸ್ಟೇಟಸ್ ಕತೆಗಳು (ಭಾಗ ೧೪೭೧) - ಮೊಬೈಲ್
ಬರಹಗಾರರ ಬಳಗ
ಅಕ್ಟೋಬರ್ ೧೩, ೨೦೨೫
೧೦ ವೀಕ್ಷಣೆಗಳು
ಹಾಗೇ ನೋಡುತ್ತಾ ನಿಂತ ಅಮ್ಮನ ಮುಖದಲ್ಲಿ ಆಶ್ಚರ್ಯವೇ ತುಂಬಿದೆ. ಅವರಿಂದಿನವರೆಗೂ ಹಾಗೆ ಅಂಗಡಿಯೊಳಗೆ ನಿಂತವರಲ್ಲ. ಮಗನ ಆಸೆಗೆ ಮೊಬೈಲ್ ಅಂಗಡಿಯೊಳಗೆ ಬಂದು ನಿಂತಿದ್ದಾರೆ. ಇದ್ದ ಸ್ವಲ್ಪ ಹಣವನ್ನೂ ಮಗನ ಆಸೆಗೆ ತಂದಿದ್ದಾರೆ. ಮಗನಿಗೋ ತನ್ನ ಗೆಳೆಯರ ಜೊತೆಗಿದ್ದೂ ಅಗತ್ಯವನ್ನ ಮೀರಿ ಮೊಬೈಲ್ ಖರೀದಿಸುವ ಆಸೆಯನ್ನ ಹೊಂದಿದ್ದಾನೆ. ಮನೆಗಿರುವ ಸಾಲ, ಪರಿಸ್ಥಿತಿ ಇದ್ಯಾವುದನ್ನೂ ಗಮನಿಸದೇ ಮೊಬೈಲ್ ಖರೀದಿಸುವ ಹಠ ಅಮ್ಮನನ್ನ ಮೊಬೈಲ್ ಅಂಗಡಿಗೆ ಕರೆತಂದಿದ್ದ. ಒಬ್ಬನೇ ಮಗನ ಆಸೆಗೆ ಅರಿವಿಲ್ಲದ ಲೋಕದೊಳಗೆ ಅಮ್ಮ ಬಂದಿದ್ದರು. ಮೊಬೈಲ್ ಖರೀದಿಯಾಯಿತು. ಮಗನ ಮುಖದಲ್ಲಿ ಸಂತೋಷ.ಅಮ್ಮನಿಗೆ ಸಾಲ ತೀರಿಸುವ ಯೋಚನೆ. ಮೊಬೈಲ್ ಮಗನ ಕೈಯಲ್ಲಿ... ಸಂತೋಷ ನೋವು ಎರಡೂ ಒಂದೇ ದಿಕ್ಕಿನ ಕಡೆಗೆ ಸಾಗಿದವು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಅಕ್ಟೋಬರ್ ೧೩, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬