ಎಲ್ಲರೂ ಎಷ್ಟು ಸಂತೋಷವಾಗಿದ್ದೀರಿ, ನನಗೆ ತುಂಬಾ ಆಶ್ಚರ್ಯ. ನೀವೆಲ್ಲರೂ ಅಷ್ಟು ಸಂತೋಷವಾಗಿರೋದಕ್ಕೆ ಹೇಗೆ ಸಾಧ್ಯ .ಮೊತ್ತ ಮೊದಲ ಬಾರಿಗೆ ಸೆರೆಮನೆಯೊಳಗಿರುವವರು ಅದನ್ನು ಶಿಕ್ಷೆ ಎಂದು ಕೊಳ್ಳದೆ ಹಾಗೆ ಬದುಕುತ್ತಿರುವುದನ್ನ ಕಂಡು ನನಗೆ ಆಶ್ಚರ್ಯವಾಗುತ್ತಿದೆ. ಆಲಸ್ಯದ ಅರಮನೆ ಎಂಬ ಸೆರೆಮನೆಯೊಳಗೆ ಬಂಧಿಯಾಗಿರೋದು ಅರ್ಥವಾಗಿಲ್ಲ. ಹಾಗೆ ಒಳಗೆ ಕುಳಿತವರು ಒಮ್ಮೆ ಬಾಗಿಲು ತೆಗೆದು ಹೊರಗೆ ಬನ್ನಿ. ಹೀಗೆ ಎಷ್ಟೇ  ಕಿರುಚಿದರೂ ಯಾರೂ ಅವನ ಮಾತನ್ನು ಕೇಳುವುದಕ್ಕೆ ತಯಾರಿಲ್ಲ.ಆತನ‌ ಸ್ವರವೇ ಬಿದ್ದು ಹೋಗಿದೆ. ಆತ ಇಷ್ಟು ದಿನ ಆ ಸೆರೆಮನೆಯಿಂದ ಹೊರಗೆ ಬಂದು ಬದುಕು ಕಟ್ಟಿಕೊಳ್ಳುವುದು ಪ್ರಾರಂಭಿಸಿದ. ಅದಕ್ಕೆ ಬೇಡಿಕೊಳ್ಳುತ್ತಿದ್ದಾನೆ ಎಲ್ಲರೂ ಅವನಿಗೆ ಹುಚ್ಚ ಎಂದು ಹೆಸರಿಟ್ಟು ಸುಮ್ಮನಾಗಿಬಿಟ್ಟಿದ್ದಾರೆ. -ಧೀರಜ್ ಬೆಳ್ಳಾರೆ                                  ಚಿತ್ರ ಕೃಪೆ: ಇಂಟರ್ನೆಟ್ ತಾಣ