ಸ್ಟೇಟಸ್ ಕತೆಗಳು (ಭಾಗ ೧೪೮೭) - ಲಭ್ಯತೆ
ಬರಹಗಾರರ ಬಳಗ
ಅಕ್ಟೋಬರ್ ೩೦, ೨೦೨೫
೭ ವೀಕ್ಷಣೆಗಳು
ಅವಳು ಬೇಸರದಿಂದ ಕುಳಿತಿದ್ದಾಳೆ. ಒಂದಿಷ್ಟು ಬಳಕೆಯ ಬಗ್ಗೆ ತನ್ನ ಲಭ್ಯತೆ ಬಗ್ಗೆ ಗೌರವ ಸಿಕ್ಕಿಲ್ಲ ಅನ್ನೋದು ಅವಳ ವಾದ. ಅವಳಿಗೆ ಹಲವು ದಿನಗಳಿಂದ ತನ್ನ ಅವಶ್ಯಕತೆ ಇದೆ ಗೌರವ ಸಿಗುತ್ತಿಲ್ಲ ಅನ್ನೋದು ಯೋಚನೆಗೆ ಬರ್ತಾ ಇತ್ತು, ಆದರೂ ಅದು ಸರಿಯೋ ತಪ್ಪೋ ಅನ್ನುವ ದ್ವಂದದ ಒಳಗೆ ಮುಳುಗಿದ್ದಳು. ಅವತ್ತು ಕೋಣೆಯೊಳಗೆ ಬಂದ ಅಪ್ಪ ಸುಮ್ಮನೆ ನನ್ನಷ್ಟಕ್ಕೆ ತಿರುಗುತ್ತಿದ್ದ ಫ್ಯಾನನ್ನು ನಿಲ್ಲಿಸಿ ಮಗಳ ಬಳಿ ಎರಡು ಮಾತು ಹೇಳಿದರು, ನೀನು ತುಂಬಾ ಸುಸ್ತಾಗಿ ಮನೆ ಒಳಗೆ ಕಾಲಿಟ್ಟಾಗ ತುಂಬಾ ಸೆಖೆಯಾಗುತ್ತಿದ್ದಾಗ ಫ್ಯಾನ್ ಹಚ್ಚಿದರೆ ನಿನಗಾಗ ಅದರ ಮೌಲ್ಯ ಅರ್ಥವಾಗುತ್ತೆ. ಅದಲ್ಲದೆ ದಾಲಿ ಮನೆಯೊಳಗೆ ಅನಗತ್ಯವಾಗಿ ಫ್ಯಾನು ತಿರುಗುತ್ತಾ ಇದ್ದರೆ ಅದರ ಬೆಲೆ ಯಾರಿಗೂ ಗೊತ್ತಾಗೋದಿಲ್ಲ, ಲಭ್ಯವಾಗುತ್ತಾ ಹೋಗು ಆದರೆ ಇನ್ನಾದರೂ ನೀನು ಖಾಲಿ ಕೋಣೆಯೊಳಗೆ ತಿರುಗುತ್ತಿರುವ ಫ್ಯಾನಿನಂತಾಗಬೇಡ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತ
ಪ್ರಕಟಿಸಿದ: ಅಕ್ಟೋಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬