ಅವನು ದುಡಿಯುತ್ತಿದ್ದಾನೆ. ಶಿಕ್ಷಣ ಮುಗಿಸಿ ದುಡಿಮೆಗೆ ಇಳಿದವನಿಗೆ ದುಡ್ಡು ಮಾಡಬೇಕೆನಿಸಿತು. ಹಾಗಾಗಿ ದುಡ್ಡಿನ ಹಿಂದೆ ಓಡಲಾರಂಭಿಸಿದ. ತನ್ನ ಮನೆಯನ್ನು ತೊರೆದು ಪರಿಚಯವಿಲ್ಲದ ಊರಿನಲ್ಲಿ ಅಪರಿಚಿತನಾಗಿ ಬದುಕು ಕಟ್ಟಿಕೊಂಡ. ಹೆಸರು ಗಳಿಸಿಕೊಂಡ ಸನ್ಮಾನಗಳು ಭಾಷಣಗಳು ಮೀಟಿಂಗ್ ಗಳು ಬ್ಯಾಂಕ್ ಅಕೌಂಟ್ ತುಂಬುತ್ತಾ ಹೋಯಿತು. ಶ್ರೀಮಂತಿಕೆ ತಲೆಯನ್ನು ದಾಟಿಬಿಡ್ತು. ಬೇಕಾದೆಲ್ಲವನ್ನ ಮನೆಗೆ ನೀಡಿದ. ಈಗ ವರ್ಷ 65 ದಾಟಿದೆ. ಈಗ ಹಾದಿ ತಪ್ಪಿರುವ ತನ್ನ ಮಗನ ಬಗ್ಗೆ ಯೋಚಿಸುತ್ತಿದ್ದಾನೆ, ಪ್ರೀತಿ ಕೊಡದೆ ಇರುವ ಮನೆಯವರ ಬಗ್ಗೆ ಬೇಸರಿಸಿಕೊಂಡಿದ್ದಾನೆ, ಮಲಗಿದಾಗ ಬಾರದಿರುವ ನಿದ್ರೆ, ದೇಹದ ತುಂಬೆಲ್ಲ ಅಡಗಿಕೊಂಡಿರುವ ನೋವುಗಳು, ಹತ್ತಿರವಿಲ್ಲದ ಗೆಳೆಯರು, ನಿಷ್ಕಲ್ಮಶದ ಪ್ರೀತಿ  ಎಲ್ಲವನ್ನು ಕಳೆದುಕೊಂಡು ಸುತ್ತಮುತ್ತ ಜನ ಇದ್ದರೂ ಒಂಟಿಯಾಗಿ ಬಿಟ್ಟಿದ್ದಾನೆ. ಈಗ ಎಲ್ಲ ಕಡೆ ವೇದಿಕೆಗಳಿಗೆ ಕಷ್ಟಪಟ್ಟು ಹೋಗಿ ಮಾತನಾಡುತ್ತಿದ್ದಾನೆ ದುಡ್ಡು ಮಾಡಬೇಕು ಬದುಕನ್ನ ಸಾಯಿಸಿಯಲ್ಲ. - ಧೀರಜ್ ಬೆಳ್ಳಾರೆ                                  ಚಿತ್ರ ಕೃಪೆ: ಇಂಟರ್ನೆಟ್ ತಾಣ