ಸ್ಟೇಟಸ್ ಕತೆಗಳು (ಭಾಗ ೧೪೯೨) - ಕಾರ್ಯಕ್ರಮ
ಬರಹಗಾರರ ಬಳಗ
ನವೆಂಬರ್ ೦೪, ೨೦೨೫
೧೦ ವೀಕ್ಷಣೆಗಳು
ಸಂಭ್ರಮದ ಕಾರ್ಯಕ್ಕೆ ನೀವು ಜೊತೆಯಾಗಬೇಕು. ಇದು ನಾವೆಲ್ಲರೂ ಕೂಡ ತುಂಬಾ ಶ್ರದ್ಧೆಯಿಂದ ಆಚರಿಸುವಂತಹ ಕಾರ್ಯಕ್ರಮ ನೀವು ಬರಲೇಬೇಕು ಅಂತ ತುಂಬಾ ಒತ್ತಾಯ ಮಾಡಿ ಶಶಿಧರ ಐತಾಳರನ್ನ ವೇದಿಕೆ ಕಾರ್ಯಕ್ರಮಕ್ಕೆ ಅಹ್ವಾನಿಸಿದ್ದರು. ಇವರಿಗೂ ಮಾತನಾಡುವ ತನಕ ಒಪ್ಪಿಕೊಂಡರು ಬಿಟ್ರು. ಕಾರ್ಯಕ್ರಮ ವೇದಿಕೆ ಏರಿದ ಮೇಲೆ ಅವರಿಗೆ ಗೊತ್ತಾಗಿರೋದು ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿರುವವರು ಬರಿಯ ಭಾವಚಿತ್ರಗೋಸ್ಕರ ಕಾರ್ಯಕ್ರಮ ರೂಪಿಸಿದ್ರು. ಶಿಷ್ಟಾಚಾರವಿಲ್ಲ ಮಾತುಗಳನ್ನು ಕೇಳುವವರಿಲ್ಲ ತಾವರಿತುಕೊಂಡದ್ದನ್ನು ಇನ್ನೊಬ್ಬರಿಗೆ ಅರ್ಪಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅದಲ್ಲದೆ ಕಾರ್ಯಕ್ರಮದ ಉದ್ದೇಶವೇ ಅಲ್ಲಿರುವ ಯಾರಿಗೂ ಸರಿಯಾಗಿ ಅರ್ಥವಾಗಿಲ್ಲ. ಮಕ್ಕಳಿಗೆ ದುಶ್ಚಟಗಳಿಂದ ದೂರವಿರುವ ಬಗ್ಗೆ ಬೋಧನೆ ಮಾಡಿದ ಅಧ್ಯಾಪಕರು ಕಾರ್ಯಕ್ರಮ ಮುಗಿದ ಮೇಲೆ ರಸ್ತೆ ಬದಿಯ ಅಂಗಡಿಯಲ್ಲಿ ಸಿಗರೇಟ್ ಸೇದುತ್ತಿದ್ದರು. ಉದ್ದೇಶವಿಲ್ಲದ ಕಾರ್ಯಕ್ರಮವನ್ನು ಯೋಜನೆ ಮಾಡುವುದೇತಕ್ಕೆ? ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಮಾಡಿ ಕಾರ್ಯಕ್ರಮದ ಕೊನೆಯಲ್ಲಿ ಒಂದಷ್ಟು ತೊಂದ್ರೆಗಳಾಗಿದೆ thank you, next time correct ಮಾಡ್ಕೋತೇವೆ, ಅಂದಂಗಾಗುತ್ತೆ ಪ್ರಯೋಜನವಿಲ್ಲದೆ ಕಾರ್ಯಕ್ರಮ ಮುಕ್ತಾಯ ಆಗಿತ್ತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ನವೆಂಬರ್ ೦೪, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬