ಅಲೆಗಳಿಗೆಲ್ಲ ಧಾವಂತ ಒಮ್ಮೆ ತನ್ನ ಪ್ರೇಯಸಿ ತೀರವನ್ನ ಅಪ್ಪಿಕೊಳ್ಳಬೇಕಂತ. ಹಾಗೆ ಅಲೆ ಎಷ್ಟೇ ಪ್ರೀತಿಸಿದರೂ ತೀರ ಎಲ್ಲರನ್ನು ಸಮಾಧಾನ ಪಡಿಸಿ ಮತ್ತೆ ಸಮುದ್ರದೊಳಗೆ ಬದುಕುವುದ್ದಕ್ಕೆ ಕಳುಹಿಸುತ್ತಿದೆ. ಅಲೆಗಳು ಪ್ರೀತಿಯಿಂದ ಬೇಡಿಕೊಂಡರೂ, ತೀರಕ್ಕೆ ತಿಳಿದಿದೆ ನನ್ನ ಬದುಕಿರುವುದೇ ಎಲ್ಲ ಅಲೆಗಳಿಂದ ಯಾರೊಬ್ಬರನ್ನು ಹೆಚ್ಚು ಪ್ರೀತಿಸುವಂತಿಲ್ಲ. ಪ್ರೀತಿ ಹೆಚ್ಚಾದರೆ ನಾನೇ ಕರಗಿ ಇಳಿದು ಬಿಡುತ್ತೇನೆ. ಯಾವುದೂ ಅತಿಯಾಗಬಾರದು. ಎಲ್ಲವನ್ನು ಸಮಾನಂತರದಲ್ಲಿ ಇಟ್ಟು ಬದುಕ‌ ಕಾಣಬೇಕು. ಅಲೆಗಳಿಗೆ ಅರ್ಥವೇ ಅಗುತ್ತಿಲ್ಲ ಮತ್ತೆ ಮತ್ತೆ ತೀರವನ್ನಪ್ಪಲು ಓಡುತ್ತಿವೆ. ಅಯ್ಯೋ ಬದುಕೇ... ಇಷ್ಟು ಹೊತ್ತು ಅಪ್ಪ‌ ನನ್ನ ಬಳಿ‌ ತೀರದ ಕತೆ‌ ಹೇಳಿದ್ದು ಯಾಕೆ‌ ಅಂತ ಯೋಚಿಸುತ್ತಿದ್ದೇನೆ. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ