ಮೈಸೂರಿನ ಕಥೆಗಳು (ಭಾಗ ೮) - ಸಂತ ಫಿಲೋಮಿನಾ ಚರ್ಚ್
ಬರಹಗಾರರ ಬಳಗ
ನವೆಂಬರ್ ೧೭, ೨೦೨೫
೧೬ ವೀಕ್ಷಣೆಗಳು
ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ ಪ್ರಮುಖವಾದ ಸಂತ ಫಿಲೋಮಿನಾ ಚರ್ಚ್" ಗೆ ಪಯಣ ಮಾಡೋಣ.
ಸಂತ ಫಿಲೋಮಿನಾ ಚರ್ಚ್ ಮೈಸೂರಿಗೆ ಭೂಷಣ. ನಿಯೋಗಾಥಿಕ್ ಶೈಲಿಯ ಈ ಚರ್ಚ್ ಮೈಸೂರು ಕ್ರೈಸ್ತ ಡಯೋಸಿಸ್‌ನ ಸಂತ ಫಿಲೋಮಿನಾ ಅವರ ಸ್ಮರಣೆಯಲ್ಲಿ ನಿರ್ಮಿಸಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಶಂಕುಸ್ಥಾಪನೆ ನೆರವೇರಿಸಿದ್ದರು. ಎಲ್ಲ ಕಟ್ಟಡಗಳಿಗೆ 1 ಅಡಿಪಾಯವಾದರೆ, ಇದಕ್ಕಿರುವುದು ಎರಡು. ಫಾದರ್ ಕಾಶೆಟ್ ಎಂಬುವರು ಮೈಸೂರು ಮಹಾರಾಜ ಬಳಿ ಬಂದು ಈಸ್ಟ್ ಇಂಡೀಸ್‌ನ ರಿಲಿಕ್ ಮೈಸೂರಿಗೆ ಬಂದಿದ್ದು, ಇಲ್ಲಿ ಕೆಥಡ್ರಲ್ ನಿರ್ಮಿಸಬೇಕು ಎಂಬ ಸಂದೇಶ ಕೊಟ್ಟರಂತೆ. ಅದರ ಗೌರವಾರ್ಥ ನಿರ್ಮಾಣವಾಗಿದ್ದು, ಈ ಚರ್ಚ್, ಫ್ರಾನ್ಸ್‌ನ ಡೇಲಿ ಎಂಬುವರು ವಿನ್ಯಾಸ ಮಾಡಿದ್ದಾರೆ. ಚರ್ಚ್‌ನ ಜೋಡಿ ಗೋಪುರಗಳು ಬರೋಬ್ಬರಿ 175 ಅಡಿ ಎತ್ತರವಿದೆ. ಚರ್ಚ್‌ನ ಮುಖ್ಯ ಸಭಾಂಗಣದಲ್ಲಿ 800 ಮಂದಿ ಕುಳಿತು ಪ್ರಾರ್ಥಿಸಬಹುದು.
ಮೈಸೂರಿನ ಅಶೋಕ ರಸ್ತೆಯಲ್ಲಿ ಸಂತ ಜೋಸೆಫರ ಚರ್ಚು 1840 ರಲ್ಲಿ ನಿರ್ಮಾಣವಾಗಿತ್ತು. ಅದೇ ಸ್ಥಳದಲ್ಲಿ ಪುನರ್ ನಿರ್ಮಾಣವಾದ ಗ್ರೀಕ್ ಲಕ್ಷಣಗಳನ್ನು ಹೊಂದಿರುವ ಚರ್ಚಿಗೆ ಸಂತ ಜೋಸೆಫ್ ಮತ್ತು ಸಂತ ಫಿಲೋಮಿನ ಚರ್ಚ್ ಎಂದು ಹೆಸರಿಸಲಾಯಿತು. ಎರಡು ಮೊನಚಾದ ಮಿನಾರುಗಳು ಈ ಕಟ್ಟಡದ ಬಹುಮುಖ್ಯ ಆಕರ್ಷಣೆ. ರೋಮನ್ ಕ್ಯಾಥೋಲಿಕರಿಗೆ ಪವಿತ್ರವಾದ ಈ ಚರ್ಚಿನಲ್ಲಿರುವ ಗಾಜು ಚಿತ್ರಗಳು ಸುಂದರ ಹಾಗೂ ಗಮನಾರ್ಹ.
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು
ಪ್ರಕಟಿಸಿದ: ನವೆಂಬರ್ ೧೭, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬